ತಾಳಿಕೋಟೆ:ಜೂ.26: ಜಾನಪದಕ್ಕಾಗಿ ಉತ್ತರ ಕರ್ನಾಟಕದ ಪ್ರತಿನಿಧಿಯಾಗಿ ಕಳೆದ 20 ವರ್ಷಗಳಿಂದ ಬೆಂಗಳೂರಲ್ಲಿ ವಾಸವಾದೆ ಬೆಂಗಳೂರಿನವರಂತೆ ಅಲ್ಲಿ ಮಾತನಾಡುತ್ತಿರುವದನ್ನು ಲಕ್ಷಿಸಿದೆ ಆದರೆ ಉತ್ತರ ಕರ್ನಾಟಕದ ತಾಯಿ ಭಾಷೆಯನ್ನು ನಾನೆಂದು ಮರೆಯಲಾರದೆ ಅದೇ ಭಾಷೆಯಲ್ಲಿ ನನ್ನ ವೈತ್ತಿಯನ್ನು ಮುಂದುವರೆಸಿಕೊಂಡು ಸಾಗಿದ್ದೇನೆಂದು ಖ್ಯಾತ ಜಾನಪದ ಹಾಗೂ ರಸಮಂಜರಿ ಔತಣ ನೀಡುತ್ತ ಸಾಗಿಬಂದ ಗುರುರಾಜ ಹೊಸಕೋಟೆ ಅವರು ನುಡಿದರು.
ಶನಿವಾರರಂದು ಸ್ಥಳೀಯ ಗ್ರಾಮದೇವತೆಯ ಜಾತ್ರಾಮಹೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಏರ್ಪಡಿಸಲಾದ ಜಾನಪದ ರಸಮಂಜರಿ ಕಾರ್ಯಕ್ರಮದ ನೇತೃತ್ವವಹಿಸಿ ಜನಸಮೂಹಕ್ಕೆ ಉಣಬಡಿಸಿದ ಅವರು ನಮ್ಮ ಉತ್ತರ ಕರ್ನಾಟಕದಲ್ಲಿ ಭಾಷೆಯಲ್ಲಿದ್ದಷ್ಟು ತಾಕತ್ತು ಯಾವ ಭಾಷೆಯಲ್ಲಿಲ್ಲಾ ಉತ್ತರ ಕರ್ನಾಟಕ ಭಾಷೆ ತಾಳಬದ್ದವಾದಂತಹ ಭಾಷೆ ಇದಾಗಿದೆ ಎಂದರು. ಆದರೆ ನಮ್ಮ ಕನ್ನಡ ಭಾಷೆಯನ್ನು ಮಾತನಾಡಲು ಬಯಸುತ್ತಾರೆ ಅದು ಬರಲಾರದೆಂದು ಹೇಳಿದ ಹೊಸಕೋಟೆಯವರು ನಾನು ಸೆನೆಮಾದಲ್ಲಿ ಪಾತ್ರಧಾರಿಯಾಗಬೇಕಾಗಿತ್ತೆಂದರೆ ಉತ್ತರ ಕರ್ನಾಟದ ಭಾಷೆಯ ಮಾತನ್ನು ನನಗೆ ಕೊಟ್ಟರೆ ಮಾತ್ರ ನಾನು ಅದನ್ನೇ ಮಾತನಾಡುತ್ತೇನೆಂದರು ಅವ್ವ ಅಪ್ಪ ಅಂಬಿ ಸಿನೇಮಾದಲ್ಲಿ ಎದೆ ಹಾಲು ಕೊಡುವ ಅಮ್ಮ ಕಣೋ ಬಾಳು ಕೊಡುವ ಅಪ್ಪ ಕಣೋ ಎಂಬುದರ ಹಾಡನ್ನು ಹಾಡಿ ರಂಜಿಸಿದ ಹೊಸಕೋಟೆಯವರು ಸೋಬಾನ ಪದ ಹಾಗೂ ಹುಡುಗನನ್ನು ಹುಡುಗಿ ನುಂಗಿತ್ತೋ..ಗುರುವೇ ಎಂಬ ಹಾಡನ್ನು ಹಾಡಿ ರಂಜಿಸಿದ ಅವರು ನಮ್ಮ ವಿದ್ಯೆಯನ್ನು ಬೆಂಗಳೂರದವರು ಬಳಸಿಕೊಳ್ಳುತ್ತಾರೆ ನಮ್ಮ ಯುವಕರು ಬೆಂಗರೂರಿನೆಡೆ ಹೋಗಿ ನಮ್ಮದೇ ಆದ ಕಲೆಯನ್ನು ಪ್ರದರ್ಶಿಸಿದರೂ ಅಲ್ಲಿಯವರೇ ತಮ್ಮ ವರ್ಚಸ್ಸು ಘನತೆ ಗೌರವವನ್ನು ಬೆಳೆಸಿಕೊಳ್ಳುತ್ತಾರೆಂದರು ಕಷ್ಟ ಪಟ್ಟರೆ ಬಹಳೇ ಸಾಧನೆ ಮಾಡಿ ಗೆಲ್ಲಬಹುದಾಗಿದೆ ನಿಮ್ಮಲ್ಲಿ ಬೆಳವಣಿಗೆಗಾಗಿ ಇರಲಿ ವಿಂಜಯಪುರ ಜಿಲ್ಲೆಯಲ್ಲಾಗಲಿ ಅಥವಾ ಧಾರವಾಡ ಹುಬ್ಬಳ್ಳಿಯಲ್ಲಾಗಲಿ ಒಂದು ಟಿವ್ಹಿ ಸ್ಟೇಶನ್ ಸ್ಥಾಪನೆಯಾಗಲೆಂಬ ಆಸೆನನ್ನದಾಗಿದೆ ಎಂದ ಅವರು ಸಿನೆಮಾ ಮಾಡುವದು ಆಗಲಾರದೆಂದು ನಾನು ಹೇಳುವದಿಲ್ಲಾ ಸಾವಿರಾರು ಸಿನೆಮಾ ಗಳಲ್ಲಿ ನಾನು ಪಾತ್ರಧಾರಿಯಾಗಿ ನಾನು ನಟಿಸಿದ್ದೇನೆ ನಾನೇ ಸ್ವತಃ ಒಂದುಸಿನೇಮಾ ಮಾಡಿದ್ದು ಅದು ಪ್ರತಿ ಮನೆಮನೆಗೂ ತೋರಿಸುವಂತಹ ಸಿನೇಮಾ ಆಗೆ ಆ ಸಿನೇಮಾದ ಹೆಸರು ಕೊಟ್ಟನೋಡ್ರಿ ಮಾಡ್ತೇವೋ ಇಲ್ಲಾ ಕೆಲಸ ಕೊಡ್ರಿ ಮಾಡ್ತಿವೊಇಲ್ಲಾ ಕೊಟ್ಟ ಹಿಂದುಗಡೆ ಎಂಬುದರ ಕುರಿತು ವಿವರಿಸಿದರಲ್ಲದೇ ತಾಳಿಕೋಟೆಯಲ್ಲಿ ಎಂತೆಂತಹ ಮಹಾತ್ಮರಿದ್ದಾರೆ ಅಂತಹ ಮಹಾತ್ಮರ ದಿನನಿತ್ಯ ದರ್ಶನ ಪಡೆಯುತ್ತಾ ಸಾಗಿರುವದು ತಾವೆಲ್ಲ ಪುಣ್ಯವಂತರು ಎಂದು ಹೇಳಿದ ಗುರುರಾಜ ಹೊಸಕೋಟೆ ಅವರು ತಾವು ಅಲ್ಲದೇ ತಮ್ಮ ಪುತ್ರರು ಹಾಗೂ ಪುತ್ರಿಯರು ಹಾಗೂ ದತ್ತಕ ಪುತ್ರನೊಂದಿಗೆ ಅನೇಕ ಜಾನಪದ ಹಾಡುಗಳನ್ನು ಹಾಡಿ ರಂಜಿಸದರಲ್ಲದೇ ಅವರ ಪುತ್ರಿ ಆವತ್ತು ಇವತ್ತು ಎಂಬ ಹಾಡನ್ನು ಹಾಡಿ ಹಿಂದಿನ ಕಾಲದಲ್ಲಿ ಇದ್ದ ಸ್ಥಿತಿಗತಿ ಹೇಗೆ ನಡೆದಿತ್ತು ಇಂದಿನ ಕಾಲದಲಿ ಸ್ಥಿತಿಗತಿ ಹೇಗೆ ನಡೆದಿದೆ ಎಂಬುದರ ಕುರಿತು ಜನಮೆಚ್ಚುಗೆ ಪಾತ್ರರಾಗುವಂತಹ ಹಾಡನ್ನು ಹಾಡಿದರಲ್ಲದೇ ಇದು ಅಲ್ಲದೇ ಅನೇಕ ಗೀತೆಗಳನ್ನು ಹಾಗೂ ಕೆಲವು ಚುಟುಕು ಭಾಷೆಗಳನ್ನಾಡುವದರೊಂದಿಗೆ ಜನಸಮೂಹಕ್ಕೆ ನಕ್ಕುನಲಿಸಿದರು.
ಗುರುರಾಜ ಹೊಸಕೋಟೆಯವರು ತಮ್ಮ ಜಾನಪದ ಕಲೆಯ ಪ್ರದರ್ಶನವನ್ನು ಪ್ರಾರಂಬಿಸಿದ ಒಂದು ಗಂಟೆ ಕಾಲ ಜಿಟಿಮಳೆ ಪ್ರಾರಂಭಿಸಿದರೂ ಈ ಪ್ರದರ್ಶನ ವೀಕ್ಷಿಸಲು ಆಗಮಿಸಿದ ಜನತೆ ತಮ್ಮ ಸ್ಥಾನದಲ್ಲಿಯೇ ಕುಳಿತು ಹಾಗೂ ನಿಂತುಯ ವೀಕ್ಷಿಸಿದರಲ್ಲದೇ ಮುಂದೆ ವರುಣ ಸಾರ್ವಜನಿಕರಿಗೆ ಜಾನಪದ ಗೀತೆಗಳನ್ನು ಕೇಳಲು ಅನುವು ಮಾಡಿಕೊಟ್ಟಿದ್ದರಿಂದ ಸಂತೋಷಪಟ್ಟಿದ್ದೇನು ಕಡಿಮೇನಿಲ್ಲಾ.