ಜನಮನ ಗೆದ್ದ ರಾಘವೇಂದ್ರ ಸ್ಟೋರ್‍ಸ್

ಕಮರ್ಷಿಯಲ್ ಚಿತ್ರಗಳ ಮೂಲಕ ಜನ ಮನ ಸೂರೆಗೊಂಡ ನಿರ್ದೇಶಕ ಸಂತೋಷ್ ಆನಂದ್ ರಾಮ್ “ ರಾಘವೇಂದ್ರ ಸ್ಟೋರ್‍ಸ್” ಚಿತ್ರದಿಂದ ವಿಭಿನ್ನ ಜಾನರ್ ಸಿನಿಮಾಗೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ವಿಜಯ್ ಕಿರಂಗದೂರ್ ನಿರ್ಮಾಣ ಮಾಡಿರುವ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಮೂಲಕ ಚಿತ್ರದ ಯಶಸ್ಸಿನ ಬಹುಪಾಲು ಶ್ರೇಯ ವಿತರಕರಾದ ಕೆಆರ್ ಜಿ  ಸ್ಟುಡಿಯೋದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರಿಗೆ ಸಲ್ಲುತ್ತದೆ.

ಚಿತ್ರದ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ಜಗ್ಗೇಶ್, ನಟಿ ಶ್ವೇತಾ ಶ್ರೀವಾತ್ಸವ, ಹಿರಿಯ ನಟ ದತ್ತಣ್ಣ, ಕಲಾವಿದರಾದ ಮಿತ್ರ, ರವಿಶಂಕರ್ ಗೌಡ, ಚಿತ್ಕಳಾ ಬಿರಾದಾರ್ ಸೇರಿದಂತೆ  ಹಲವರು ಚಿತ್ರದ ಯಶಸ್ಸಿಗೆ ಖುಷಿ ಹಂಚಿಕೊಂಡರು.

ಚಿತ್ರ ತಂಡದ ಎಲ್ಲಾ ಸದಸ್ಯರ ಮುಖದಲ್ಲಿ ಗೆಲುವಿನ ಮಂದಹಾಸ ಮನೆ ಮಾಡಿತ್ತು.

ಹಿರಿಯ ನಟ ಜಗ್ಗೇಶ್ ಮಾತನಾಡಿ, 40 ವರ್ಷದ ಚಿತ್ರರಂಗದ ಜೀವನದಲ್ಲಿ ಹೊಸ ಮತ್ತು ವಿಭಿನ್ನ ಅನುಭವ ನೀಡುವ ಚಿತ್ರ ರಾಘವೇಂದ್ರ ಸ್ಟೋರ್ಸ್, ಹಾಸ್ಯದ ಜೊತೆಗೆ ಕಮರ್ಷಿಯಲ್ ಚಿತ್ರ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಇದು ಖುಷಿಯ ಸಂಗತಿ. ಎಲೆಕ್ಷನ್, ಐಪಿಎಲ್ ನಡುವೆಯೂ ಚಿತ್ರಮಂದಿರಕ್ಕೆ ಜನರ ಬರುತ್ತಿರುವುದು ಸಂತಸ ತಂದಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಮರ್ಷಿಯಲ್ ಚಿತ್ರದ ಮಾಡಿ ಯಶಸ್ಸು ಗಳಿಸಿದ್ದ ನಡುವೆ ರಾಘವೇಂದ್ರ ಸ್ಟೋರ್ ವಿಭಿನ್ನ ಚಿತ್ರ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ನಿರೀಕ್ಷೆ ನಿಜವಾಗಿದೆ ಎಂದು ಹೇಳಿದರು.

ನಟಿ ಶ್ವೇತಾ ಶ್ರೀವಾತ್ಸವ , ಯಶಸ್ವಿ ಚಿತ್ರದ ಭಾಗವಾಗಿರುವು ಖುಷಿ ಕೊಟ್ಟಿದೆ. ಚಿತ್ರ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಜನರಿಂದ ಉತ್ತಮ ಪ್ರತಿಕ್ರಿಯೆ

ರಾಘವೇಂದ್ರ ಸ್ಟೋರ್ ಚಿತ್ರಕ್ಕೆ ರಾಜ್ಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿಯೂ ಮನೆ ಮಂದಿಯಲ್ಲಾ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ ಇದು ಸಂತಸದ ಸಂಗತಿ ಎಂದು ವಿತರಕ ಯೋಗಿ ಜಿ ರಾಜ್ .ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‍ನ ನಡುವೆ ಚಿತ್ರಮಂದಿರಕ್ಕೆ ಜನರನ್ನು ರಾಘವೇಂದ್ರ ಸ್ಟೋರ್ ಕರೆತರುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ರಾಜ್ಯದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಐಪಿಎಲ್, ಎಲೆಕ್ಷನ್ ಏನೇ ಇದ್ದರೂ ಹಿರಿಯ ನಾಗರಿಕರು ಸೇರಿದಂತೆ ಜನರು ಬಯಸುವುದು ಮನರಂಜನೆಯನ್ನು ನಾವು ರಾಘವೇಂದ್ರ ಸ್ಟೋರ್ ಚಿತ್ರದ ಮೂಲಕ ನೀಡಿದ್ದೇವೆ ಎನ್ನುವ ಖುಷಿಯೂ ಇದೆ. ಒಳ್ಳೆಯ ಚಿತ್ರ ನೀಡಿದರೆ ಜನರ ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಲ್ಟಿಪ್ಲೆಕ್ ಸೇರಿದಂತೆ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸದ್ಯದಲ್ಲಿಯೇ ನಮ್ಮ ನಿರ್ಮಾಣದ ಉತ್ತರ ಖಾಂಡ ಚಿತ್ರದ ಚಿತ್ರೀಕರಣ ಆರಂಭಿಸುತ್ತೇವೆ ಎಂದರು.