ಜನಮನದಲ್ಲಿ ಹಚ್ಚಹಸಿರಾಗಿ ಉಳಿದ ನೆಹರು…..

ಹಿಂದೂ ದೇಶದ ಮುಕುಟಮಣಿ ರಾಜ್ಯ ಜಮ್ಮು-ಕಾಶ್ಮೀರದ ಪಾಂಡಿತ್ಯ ವಂತ ಮನೆತನದ ಗಂಗಾಧರ ನೆಹರುರವರ ಮೊಮ್ಮಗ ಮೋತಿಲಾಲ್ ನೆಹರು ಮತ್ತು ಶ್ರೀಮತಿ ಸ್ವರೂಪರಾಣಿ ನೆಹರುರವರ ಸುಪುತ್ರ ಜವಾಹರರ್‍ಲಾಲ್ ನೆಹರು 14ನವೆಂಬರ 1889 ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದರು ದೇಶ ವಿದೇಶಗಳಲ್ಲಿ ಜ್ಞಾನಾರ್ಜನೆ ಗೈದು 1912ರಲ್ಲಿ ವಕೀಲಿ ವೃತ್ತಿಯೊಂದಿಗೆ ಸಾರ್ವಜನಿಕ ಬದುಕಿಗೆ ಕಾಲಿಟ್ಟರು. 1916ರಲ್ಲಿ ಬಾಳಸಂಗಾತಿ ಶ್ರೀಮತಿ ಕಮಲಾ ಕೌಲ್ ಅವರನ್ನು ವಿವಾಹವಾದರು.
ದೇಶಾದ್ಯಂತ ನಡೆದಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮನಸಾ ಪೂರ್ತಿ ಭಾಗವಹಿಸಿದರು. 1917 ರಲ್ಲಿ ಹೋಂ ರೂಲ್ ಚಳುವಳಿಯ ನೇತೃತ್ವ ವಹಿಸಿದರು. 1920 ರಲ್ಲಿ ಉತ್ತರಪ್ರದೇಶದ ಪ್ರತಾಪಘರ ನಗರದಲ್ಲಿ ಕಿಸಾನ್ ಯಾತ್ರೆ ಕೈಗೊಂಡರು. 1923 ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಆಯ್ಕೆಯಾದರು 1929 ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು.
ಫೆಬ್ರುವರಿ 14 ,1935 ರಂದು ಅಲ್ಮೋರಾ ಜೈಲಿನಲ್ಲಿ ನೆಹರೂರವರು ತಮ್ಮ ಆತ್ಮಚರಿತ್ರೆಯ ಬರವಣಿಗೆಯನ್ನು ಪೂರ್ಣಗೊಳಿಸಿದರು.1946 ಜುಲೈ 6ರಂದು ನಾಲ್ಕನೇ ಬಾರಿಗೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅವಿರೋಧವಾಗಿ ರಾಷ್ಟ್ರದ ಮೊಟ್ಟಮೊದಲ ಪ್ರಧಾನಿಯಾಗಿ ಆಯ್ಕೆಗೊಂಡರು.
1951 ರಲ್ಲಿ ಸಾರ್ವತ್ರಿಕ ಚುನಾವಣೆ ಜರುಗಿತು ನೆಹರುರವರು 1951, 1957, 1962 ದಿಲ್ಲಿ ಆಯ್ಕೆಗೊಂಡರು. ಭಾರತ ದೇಶದ ಪರಮೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು 1955 ರಲ್ಲಿ ಪಂಡಿತ್ ಜವರಲಾಲ್ ನೆಹರು ರವರಿಗೆ ಪ್ರಧಾನ ಮಾಡಲಾಯಿತು. ಅಲ್ಲದೇ ನೊಬೆಲ್ ಶಾಂತಿ ಪಾರಿತೋಷಕಕ್ಕೆ 13 ಭಾರಿ ಶಿಫಾರಸು ಮಾಡಿದರು ಅವರು ಅದನ್ನು ಸ್ವೀಕರಿಸಲಿಲ್ಲ. ಚಿಕ್ಕ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ನೆಹರೂರವರು ತಮ್ಮಜನ್ಮದಿನ ನವೆಂಬರ 14ನ್ನು ತಮ್ಮ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಅರ್ಪಿಸಿದರು. ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ನೆಹರೂರವರನ್ನು ಚಾಚಾ ನೆಹರು ಎಂದು ಕರೆಯಲಾಗುತ್ತದೆ.
27 ಮೇ 1964 ರಂದು ನವದೆಹಲಿಯ ತೀನಮೂರ್ತಿ ಭವನದಲ್ಲಿ ಹೃದಯಾಘಾತದಿಂದ ನಿಧನರಾದರು.
ಸತತ ಹದಿನೇಳು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಅಧಿಕಾರದಲ್ಲಿ ಅತ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಪ್ರಥಮ ಸ್ಥಾನ ಹೊಂದಿತ್ತು. ಅಭಿವೃದ್ಧಿಯ ಹರಿಕಾರರಾಗಿ ಜನಮನದಲ್ಲಿ ಎಂದೆಂದಿಗೂ ಹಚ್ಚಹಸಿರಾಗಿ ಸ್ಮರಣೀಯರಾಗಿ ಉಳಿದಿದ್ದಾರೆ.
ಗಂಗಾಧರ ದೊಡವಾಡ ಉಣಕಲ್ ಹುಬ್ಬಳ್ಳಿ.