
ಶಹಾಪುರ:ಮಾ.12:ಕಾಯಕದೊಳಗೆ ಸಮಾಜದ ಕೊಳಕನ್ನು ಕಳೆಯುª,ದಣಿವರಿಯದÀ ಕಾಯಕದ ನಿಜ ನಾಯಕ ಎಂದು ಕೃತಿ ಸಾರತ್ವವನ್ನೆ ಹೇಳುವ ಶಹಾಪುರ ಮತಕ್ಷೇತ್ರದ ಜನಾನುರಾಗಿ, ಮಾಜಿ ಮಂತ್ರಿ, ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರವರು ಜನಮನಗೆದ್ದ ಸಜ್ಜನ ರಾಜಕಾರಣಿ ಎಂದು ಸುಕ್ಷೇತ್ರ ಅಬ್ಬೆತುಮಕುರಿನ ಸದ್ಗುರು ವಿಶ್ವರಾಧ್ಯರ ಸಿದ್ದ ಸಂಸ್ಥಾನ ಮಠದ ಪಿಠಾಧಿಪತಿಗಳಾದ ಷ,ಬ್ರ, ಉಪಚಾರ್ಯರ ರತ್ನ ಡಾ, ಗಂಗಾಧರ ಶಿವಾಚಾರ್ಯರು ಹೆಳಿದರು.ದರ್ಶನಾಪುರ ಅಭಿಮಾನಿ ಬಳಗದ ಆಶ್ರೆಯದಲ್ಲಿ ಹಮ್ಮಿಕೊಂಡ, ಶಹಾಪುರ ಹೊರಹೊಲಯದಲ್ಲಿರುವ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಕಾಯಕದ ನಿಜನಾಯಕ ಕೃತಿ ಸಮಾರಂಭ ಉಧ್ಘಾಟನೆ ಮತ್ತು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀಗಳು, ಬಡವರ ದುರ್ಭಲರ ದ್ವನಿಯಾಗಿ ಕ್ಷೇತ್ರದ ಜನ ಸಮಾನ್ಯರ ಜೀವಾಳವಾಗಿ ಕರ್ತವ್ಯ ನಿಷ್ಠೆ ಪ್ರಮಾಣಿಕ ಕಾರ್ಯಗಳನ್ನು ಮಾಡುತ್ತಾ ಜನಮಾನಸದಲ್ಲಿ ಹೆಸರು ಮಾಡಿದ ದರ್ಶನಾಪುರವರು, ಸರಳ ಸ್ವಾಭಾವದ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ರಾಜಕಾರಣವನ್ನೆ ವೃತ್ತಿಯನ್ನಾಗಿಸಿಕೊಂಡ ಹಲವಾರು ರಾಜಕಾರಣಿಗಳು ಜಗಜಾಹೀರರಾಗಿದ್ದಾರೆ. ಆದರೆ ವೃತ್ತಿಪರಮದೈವವೆಂದು ನೆಂಬಿಕೊಂಡು ಕ್ಷೇತ್ರದ ಪ್ರತಿ ಜನಸಾಮಾನ್ಯರ ಹಿತವನ್ನು ಕಾಪಾಡುವ ರಾಜಕಾರಣ ನೀತಿಯ ನಿಜನಾಯಕನ ಸದ್ಗುಣಗಳಾಗಿವೆ. ಈ ಮನೋಭಾವನೆಗಳನ್ನು ಮೈಗೂಡಿಸಿಕೊಂಡ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರವರು ಕರ್ನಾಟಕ ರಾಜಕೀಯಕ್ಕೆ ಮಾದರಿಯಾಗಿದ್ದಾರೆ. ಎಂದು ಶ್ಲಾಘಿಸಿದ ಶ್ರೀಗಳು.ಬದುಕನ್ನು ಕಟ್ಟಿಕೊಡುವಲ್ಲಿ ದರ್ಶನಾಪುರ ಕುಟುಂಬ ಅತ್ಯಂತ ಸರ್ವ ಶ್ರೇಷ್ಟತೆ ಪಡೆದಿದೆ ಎಂದರು. ದರ್ಶನಾಪುರವರಿಗೆ ನೂರಾರು ಕಾಲ ಆಯುಷ್ಯ ಆರೋಗ್ಯ ಐಶ್ವರ್ಯ ನೀಡಿ ಸಮಾಜಕ್ಕೆ ಸೇವೆಗೆ ಸಮರ್ಪಣೆಯಾಗಲಿ ಎಂದು ಶ್ರೀಗಳು ಆಶಿಸಿದರು.ವೇದಿಕೆಯಲ್ಲಿ ಮಾಗಣಗೇರಾದ ಪೂಜ್ಯ ಶ್ರೀ ಡಾ, ವಿಶ್ವರಾಧ್ಯ ಸಿವಾಚಾರ್ಯರು ಭ್ರಹಮ್ನಮಠ. ಕಡಕೊಳದ ಶ್ರೀ ಮಡಿವಾಳೇಶ್ವರ ಮಠದ ಪೂಜ್ಯ ಶ್ರೀ ರುದ್ದಮುನಿ ಶಿವಾಚಾರ್ಯರು ,ಶಹಾಪುರದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ವೆ,ಬಸವಯ್ಯ ಶರಣರು ಶ್ರೀ ಪಕೀರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಮಾಹಾಸ್ವಾಮೀಗಳು. ಪೂಜ್ಯ ಸಿದ್ದೇಶ್ವರ ಶಿವಾಚಾರ್ಯರು. ಕನ್ಯಾಕೊಳೂರಿನ ಪೂಜ್ಯ ಶ್ರೀ ಚೆನ್ನವೀರ ಶಿವಾಚಾರ್ಯರು .ಸಗರದ ಪೂಜ್ಯ ಶ್ರೀ ಮರಳ ಮಾಹಾಂತೇಶ್ವರ ಶಿವಾಚಾರ್ಯರು. ಪೂಜ್ಯ ಸೂಗೂರೇಶ್ವರ ದೇವರು. ಮದ್ದರ್ಕಿಯ ಪೂಜ್ಯ ಶ್ರೀ ಶೀಲವಂತೇಶ್ವರ ಶಿವಾಚಾರ್ಯರು. ಸಗರದ ಪೂಜ್ಯ ಸೋಮಶೇಖರ ಶಿವಾಚಾರ್ಯರು. ಕೆಂಭಾವಿಯ ಪೂಜ್ಯ ಚೆಬ್ಬಬಸವವೇಶ್ವರ ಶಿವಾಚಾರ್ಯರು ದೊರನಳ್ಳಿಯ ಪೂಜ್ಯ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ಗೋಗಿಯ ಪೂಜ್ಯ ಶ್ರೀ ಸೈಯದ ಮಹಮ್ಮದ ಹುಸೇನಿ ಸಜ್ಜಾದೆ ನಸೀನ ಹಾಜಿತಾತನ. ದೇವಾಪುರದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ಹೋತಪೇಟದ ಕೈಲಾಸ ಆಶ್ರಮದ ಪೂಜ್ಯ ಶಿವಲಿಂಗ ಮಾಹಾಸ್ವಾಮೀಗಳು ನಗನೂರಿನ ಪೂಜ್ಯ ಸೂಗೂರೇಶ್ವರ ಶಿವಾಚಾರ್ಯರು. ಶಹಾಪುರದ ಕಾಳಹಸ್ತೆಂದ್ರ ಮಾಹಾಸ್ವಾಮೀಗಳು ಸೇರಿದಂತೆ ಸಗರ ನಾಡಿನ ವಿವಿಧ ಮಠಾಧೀಶರು ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ಜರುಗಿತು. ಕೃತಿ ಸಂಪಾಕರಾದ ಸಾಹಿತಿ ಸಿದ್ದರಾಮ ಹೊನಕಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರದ ಏಕದಂಡಿಗಿ ಮಠದ ಪೂಜ್ಯ ಅಜೇಯಂದ್ರ ಮಾಹಾಸ್ವಾಮೀಗಳು ಕೃತಿ ಕುರಿತು ವಿಶ್ಲಷೇಣೆ ಮಾಡಿದರು. ಮುಖ್ಯ ಅಥಿತಿಗಳಾಗಿ ಮಾಜಿ ಎಮ್,ಎಲ್,ಸಿ, ಚೆನ್ನಾರಡ್ಡಿ ತುನ್ನೂರ ಆಗಮಿಸಿದ್ದರು. ಹಿರಿಯ ರಾಜಕಾರಣಿ ಬಸವರಾಜಪ್ಪಗೌಡ ದರ್ಶನಾಪುರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಮರಯ್ಯಸ್ವಾಮೀ ಹೀರೆಮಠ ಜಾಲಿಮೆಂಚಿಯವರು ಕಾರ್ಯಕ್ರಮ ನೀರೂಪಿಸಿದರು. ಕೃತಿ ಸಹ ಸಂಪಾಕರಾದ ಮಡಿವಾಳಪ್ಪಗೌಡ ಹೆಗ್ಗನದೊಡ್ಡಿ. ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಹಿರಿಯ ಮುಖಂಡರು ಆಗಮಿಸಿದ್ದರು.
ಎಸ್,ಎಸ್,ಎಲ್,ಸಿ, ಕಲಿತ ನಿರುಧ್ಯೋಗಿಯನ್ನು ಪಕ್ಕದಲ್ಲೆ ಕರೆಸಿಕೊಂಡು, ರಾಜ್ಯದಾನಿಂದಲೆ ಸರ್ಕಾರಿ ಶಾಲೆ ಮಾಸ್ತರ ನೌಕರಿ ನೀಡಿ, ಜೋತೆಯಲ್ಲಿ ಆರ್ಡರ ಕಾಪಿಯೊಂದಿಗೆ ಸ್ವಗ್ರಾಮಕ್ಕೆ ಕಳಿಸಿದ ಕಿರ್ತಿ ಮಾಜಿ ಮುಖ್ಯ ಸಚೇತಕ, ಮಾಜಿ ಮಂತ್ರಿ ದಿವಂಗತ ಬಾಪುಗೌಡ ದರ್ಶನಾಪುರವರಿಗೆ ಸಲ್ಲುತ್ತದೆ. ಅವರ ಬಡವರ ಮೇಲಿರುವ ಪ್ರೀತಿ ವಿಶ್ವಾಸಗಳು ಇಂದಿಗೂ ಅವರ ಸುಪುತ್ರರಾದ ಶರಣಬಸ್ಸಪ್ಪಗೌಡ ದರ್ಶನಾಪುರವರ ಕಾಳಜಿಯಿಂದ ಕರ್ತವ್ಯನಿಷ್ಠೆಯಿಂದ ಪಾಲನೆ ಮಾಡುತ್ತಾ ಸಾಗಿದ್ದಾರೆ., ಅಪ್ಪಟ ಅಭಿವೃದ್ದಿಯ ಹರಿಕಾರರಾಗಿ ದರ್ಶನಾಪುರವರ ಹೆಸರು ಜನಮನದಾಳದಲ್ಲಿ ಹಜರಾಮರವಾಗಲಿ..
ಉಪಚಾರ್ಯ ರತ್ನ, ಷ,ಬ್ರ, ಪೂಜ್ಯ ಆ, ಗಂಗಾಧರ ಶಿವಾಚಾರ್ಯರು
ಸುಕ್ಷೇತ್ರ ಅಬ್ಬೆತುಮಕುರ .