ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವೆ: ಶಿವಣ್ಣನವರ

ಬ್ಯಾಡಗಿ,ಜೂ30: ಚುನಾವಣೆಯ ಸಂದರ್ಭದಲ್ಲಿ ತಾವು ಪಕ್ಷದ ಪ್ರತಿನಿಧಿಯಾಗಿ ಸ್ಪರ್ಧೆ ಮಾಡಿರುತ್ತೇವೆ. ಆಯ್ಕೆಗೊಂಡ ನಂತರ ಯಾವುದೇ ಪಕ್ಷ, ಜಾತಿ ಮತಕ್ಕೆ ಸೀಮಿತವಾಗದೇ ಕ್ಷೇತ್ರದ ಎಲ್ಲ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಯಾಗಿ ಪಕ್ಷಭೇದ ತೋರದೇ ಕಾರ್ಯ ನಿರ್ವಹಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 2013 ಚುನಾವಣೆಗಿಂತ ಈ ಬಾರಿ ತಮಗೆ ಅತಿ ಹೆಚ್ಚು ಮತಗಳನ್ನು ಕ್ಷೇತ್ರದ ಜನರು ನೀಡುವ ಮೂಲಕ ತಮ್ಮನ್ನು ಅತ್ಯಧಿಕ ಮತಗಳ ಪ್ರಮಾಣದಲ್ಲಿ ಜಯಶಾಲಿ ಮಾಡಿದ್ದು, ಅದಕ್ಕೆ ತಾವು ಎಲ್ಲ ಮತದಾರರಿಗೆ ಚಿರಋಣಿಯಾಗಿರುತ್ತೇನೆ. ತಮ್ಮ ಮೇಲೆ ಭರವಸೆ ಇಟ್ಟ ಕ್ಷೇತ್ರದ ಎಲ್ಲ ಜನರಿಗೂ ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಫಲ ದೊರಕಿಸಿಕೊಡಬೇಕು ಎಂಬುದು ತಮ್ಮ ಆಶಯವಾಗಿದ್ದು, ಬ್ಯಾಡಗಿ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಕನಸು ಹೊಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್ ಸೌಲಭ್ಯ ಒದಗಿಸಿ ಕೊಡುವಂತೆ ಮನವಿ ಪತ್ರ ನೀಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತ್ತಿ, ಡಿ.ಎಚ್.ಬುಡ್ಡನಗೌಡ್ರ, ಶ್ರೀನಿವಾಸ ಕುರಕುಂದಿ, ಮಾರುತಿ ಅಚ್ಚಿಗೇರಿ, ಶಿವಣ್ಣ ಅಂಬಲಿ, ದ್ಯಾಮನಗೌಡ ಚಿಕ್ಕನಗೌಡ್ರ, ಈಶಪ್ಪ ಎಲಿಹೊಳೆ, ಶಿವನಗೌಡ ನೀಲನಗೌಡ್ರ, ಆನಂದಯ್ಯ ಹಿರೇಮಠ, ಶಿವನಗೌಡ ಚಿಕ್ಕನಗೌಡ್ರ, ಸಣ್ಣಪ್ಪ ಬೆನ್ನೂರ, ಮಾಲತೇಶ ದೊಡ್ಮನಿ, ಬಸನಗೌಡ ಚಿಕ್ಕನಗೌಡ್ರ, ರಾಚಯ್ಯ ಹಿರೇಮಠ, ಮಾಲತೇಶ ರಟ್ಟೀಹಳ್ಳಿ, ಸಂತೋಷ ಇಚ್ಚಂಗಿ, ಚಂದ್ರು ಉಚ್ಚಂಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.