ಜನಪ್ರತಿನಿಧಿಗಳ ಕಾಯ್ದೆ ಅಡಿಯಲ್ಲಿ ದೂರು

ರಾಯಚೂರು,ಮಾ.೦೬- ನಗರ ಶಾಸಕರಾದ ಡಾ. ಶಿವರಾಜ ಪಾಟೀಲ್ ಅವರು ೬೦೦೦ ಕೋಟಿ ಅನುದಾನ ನಗರ ಕ್ಷೇತ್ರಕ್ಕೆ ತಂದು ಇತಿಹಾಸದಲ್ಲೇ ಯಾರು ಮಾಡದ ಸಾಧನೆ ನಾನು ಮಾಡಿರುವೆ ಎಂದು ಜಂಬಕೊಚ್ಚಿಕೊಳ್ಳುತ್ತಿದ್ದೀರಿ ಆದರೆ ಅ ಹಣ ಸರಿಯಾಗಿ ಬಳಕೆಯಾಗಿದೀಯಾ? ನೀವೂ ತಂದಿರುವ ಒಟ್ಟು ಅನುದಾನವಾದರೂ ಎಷ್ಟು ಎನ್ನುವುದರ ಲೆಕ್ಕ ಜನತೆಗೆ ನೀಡಿ ಶಾಸಕರೇ ಅನುದಾನದ ಹಣ ಜನರು ಕಟ್ಟುವ ತೆರಿಗೆ ಹಣದಿಂದ ಬಂದಿರುವುದು ಹಣ ಎಲ್ಲಿ ಏನು ಕೆಲಸವಾಗಿದೆ, ಯಾವ ಕಾಮಗಾರಿ ಪೂರ್ಣವಾಗಿದೆ, ಎಂದು ಜನರಿಗೆ ಪೂರ್ಣ ಮಾಹಿತಿಯ ಲೆಕ್ಕ ನೀಡಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ವಿರುಪಾಕ್ಷಿ ಶಾಸಕ ಡಾ ಶಿವರಾಜ ಪಾಟೀಲ್ ವಿರುದ್ಧ ಗುಡುಗಿದರು.
ರಾಯಚೂರು ನಗರದಲ್ಲಿ ಹಲವಾರು ರಸ್ತೆಗಳು ಡಾಂಬರ್ ಹಾಕಿದ್ದು ಕೇವಲ ಒಂದೆರಡು ತಿಂಗಳಲ್ಲಿ ಕಿತ್ತು ಹೋಗಿವೆ, ಕಳೆದ ವಾರದಿಂದ ೩೫ ವಾರ್ಡ್ ಗಳಲ್ಲಿ ಪರಿಶೀಲನೆ ಮಾಡಿದ್ದೇವೆ, ಬಿ ಟಿ ರಸ್ತೆಗಳು ಪ್ರಾರಂಭವಾಗಿವೆ ಆಸ್ಕಿಹಾಳ ಯಿಂದ ಡಿಸಿ ರಸ್ತೆವರಿಗೆ ಆದ ರಸ್ತೆ ಈಗಾಗಲೇ ಹಲವು ಕಡೆಗೆ ಕಿತ್ತುಹೋಗಿರುವುದು.ಟಿಪ್ಪು ಸುಲ್ತಾನ್ ರಸ್ತೆ, ಮಾವಿನಕೇರಿ ರಸ್ತೆ,ವೆಸ್ಟ್ ಪೊಲೀಸ್ ಸ್ಟೇಷನ್ ರಸ್ತೆ, ವಾರ್ಡ್ ನಂಬರ್ ೭ರಲ್ಲಿ ನಡಿಯುತ್ತಿರುವ ರಸ್ತೆ,ಈ ರಸ್ತೆಗಳ ಕಾಮಗಾರಿ ಕಳಫೆ ಮಟ್ಟದಲ್ಲಿವೆ, ಹಾಗೂ ಕಾಮಗಾರಿ ನಡೆಯುವಾಗ ಸ್ಥಳದಲ್ಲಿ ಯಾವ ಇಲಾಖೆಯ ಕೆಲಸ, ಯಾರು ಗುತ್ತೇದಾರ, ಎಷ್ಟು ಕಾಮಗಾರಿಗೆ ಹಣ ಎನ್ನುವುದು ಪೂರ್ಣ ಫಲಕ ಹಾಕಬೇಕು ಆದರೆ ಹಲವಾರು ಕಾಮಗಾರಿಗಳು ನಡಿಯುವ ಜಗದಲ್ಲಿ ಬೋರ್ಡ್ ಇಲ್ಲಾ ಒಂದು ಕಡೆಗೆ ಹಾಕಿದ್ದಾರೆ, ಯಾರು ನೋಡದ ಸ್ಥಳದಲ್ಲಿ ಹಾಕಿದ್ದಾರೆ, ಇವುಗಳ ಬಗ್ಗೆ ಲೋಕಪಯೋಗಿ ಇಲಾಖೆ, ಪಿ ಡಬ್ಲ್ಯೂ ಡಿ ಇಲಾಖೆಗೆ ಮಾಹಿತಿ ಹಕ್ಕು ಮುಖಾಂತರ ಎಸ್ಟೆಮೆಂಟ್ ಕಾಪಿಗಳನ್ನ ಕೇಳಿದಿವೆ ಅವೆಲ್ಲಾ ದಾಖಲೆ ಸಂಗ್ರಹಿಸಿ ಶಾಸಕರ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು,
ನಿನ್ನೆ ರಾತ್ರಿ ದೇವದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ಬಿವಿ ನಾಯಕ್, ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರು ಸೋಲುವ ಭಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕರೆಮ್ಮ ನಾಯಕ್ ಅವರ ಪ್ರಚಾರ ವಾಹನದ ಚಾಲಕ, ಹಾಗೂ ಆ ಗಾಡಿಗೆ ಇವರ ಬೆಂಬಲಿಗ ಅಡ್ಡ ಹಾಕಿ ದಾಳಿ ಮಾಡಿರುವುದು ಖಂಡನಿಯ, ಇಷ್ಟೆಲಾ ಆದ್ರೂ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಲ್ಲ, ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರ ಒತ್ತಡದಿಂದ ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೂ ಏನು ಮಾಡದೇ ಕೈ ಕಟ್ಟಿ ಕುಳಿತಿರುವ ಪೊಲೀಸರು, ಪಕ್ಷದ ಎಲ್ಲಾ ಮುಖಂಡರು ಸೇರಿ ಇವರ ವಿರುದ್ಧ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೂಡಲೆ ಎಫ್ ಐ ಆರ್ ಹಾಕಿ ಎಂದು ಜಿಲ್ಲಾ ಪೊಲೀಸ್ ಕಚೇರಿಗೆ ಹೋಗಿ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್, ನಗರ ಕ್ಷೇತ್ರದ ವಿನಯ್ ಕುಮಾರ್, ಕಾರ್ಯಧ್ಯಕ್ಷರಾದ ಶಿವಶಂಕರ ವಕೀಲರು, ಜೆಡಿಎಸ್ ನಗರ ಅಧ್ಯಕ್ಷ ತಿಮ್ಮರೆಡ್ಡಿ,ಲಕ್ಷ್ಮಿಪತಿ ಗಾಣದಾಳ ಯುಶಫ್ ಖಾನ್, ಯುವ ಘಟಕದ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿದ್ದರು.