ಜನಪ್ರತಿನಿಧಿಗಳಿಲ್ಲದ ಗ್ರಾಪಂಗಳಿಗೆ ಮೀಸಲಾತಿ ಘೋಷಣೆ-ಖಂಡನೆ

ಕೋಲಾರ, ಜೂ. ೨೭:ತಾಲೂಕಿನ ಚೌಡದೇನಹಳ್ಳಿ ಗ್ರಾಮ ಪಂಚಾಯಿತಿಗೆ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಸುಮಾರು ಎರಡುವರೆ ಷಗಳಿಂದ ಚುನಾವಣೆಯೇ ನಡೆದಿಲ್ಲ. ಆದರೂ ಚುನಾವಣೆ ನಡೆಸಲು ಗಮನ ಹರಿಸದ ಜಿಲ್ಲಾಡಳಿತ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಮೀಸಲಾತಿಯನ್ನು ಘೋಷಣೆ ಮಾಡಿರುವುದು ಖಂಡನೀಯ ಹಾಗೂ ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೆಲಸವಾಗಿದೆ ಎಂದು ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅರೋಪಿಸಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಯಾರೋ ಒಬ್ಬ ಚುನಾಯಿತ ಪ್ರತಿನಿಧಿ ಇಲ್ಲವಾದಲ್ಲಿ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂಬ ನಿಯಮಗಳಿದ್ದರೂ ಜಿಲ್ಲಾ ಚುನಾವಣೆ ಅಧಿಕಾರಿಗಳು ಹಾಗೂ ರಾಜ್ಯ ಚುನಾವಣೆ ಅಧಿಕಾರಿಗಳು ಗಮನಹರಿಸದೆ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದರು.
ಚೌಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಕ್ಕಪುರ, ಚೌಡದೇನಹಳ್ಳಿ, ದೊಡ್ಡವಲ್ಲಬೆ, ದಿನ್ನೆಹೊಸಳ್ಳಿ, ಕಲ್ಕೆರೆ ಗ್ರಾಮಗಳಿಗೆ ಹಾಗೂ ಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ತೂಕಲಘಟ್ಟ, ಗಿರಿಜನಪೇಟೆ, ಮೇಡಿಹಾಳ, ಅಂದ್ರಹಳ್ಳಿ ಗ್ರಾಮಗಳಿಗೆ ಶೀಘ್ರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿ ೨ನೇ ಅವಧಿಯ ಮೀಸಲಾತಿ ಘೋಷಣೆ ಜಾರಿಗೆ ತನ್ನಿ ಇಲ್ಲವಾದಲ್ಲಿ ಇದು ಕಾನೂನು ಬಾಹಿರವಾಗುತ್ತದೆ ಎಂದು ಹೇಳಿದರು.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿಗೆ ಇರುವ ಕಾನೂನು ತೊಡಕನ್ನು ನಿವಾರಣೆ ಮಾಡಿ ಶೀಘ್ರ ಚುನಾವಣೆ ನಡೆಸಿ ವೇಮಗಲ್ ಚನಪನಹಳ್ಳಿ, ಪುರಹಳ್ಳಿ, ಸಿಂಗೇಹಳ್ಳಿ, ಪೆರ್ಜೇನಹಳ್ಳಿ, ಕುರುಬರಹಳ್ಳಿ, ಕಲ್ವ ಚಿಕ್ಕಲ್ಲಬ್ಬಿ, ಮಂಜಲಿ, ಮಂಜಲಿ, ಮಜರಾ ಬೆಟ್ಟಹೊಸಪುರ, ಕುರುಗಲ್, ಆರ್ಜೇನಹಳ್ಳಿ, ಮಲ್ಲಪ್ಪನಹಳ್ಳಿ, ಚಂದ್ರಶೇಖರಪುರ ಮಡಿವಾಳ ಮಂಚಂಡಹಳ್ಳಿ, ಸುಳದೇನಹಳ್ಳಿ, (ಕ್ಯಾಲನೂರು ಕ್ರಾಸ್), ವಿಶ್ವನಗರ, ಪಟ್ಟಣ ಪಂಚಾಯಿತಿ ಚುನಾವಣೆ ನಡೆಸಿ ಶೀಘ್ರವಾಗಿ ಪ್ರಜಾಪ್ರಭುತ್ವ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು..
ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಗೆ ಶೀಘ್ರ ಚುನಾವಣೆ ನಡೆಸಿ, ಚೌಡದೇನಹಳ್ಳಿ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸಿ, ಈ ಮೇಲ್ಕಂಡ ಹಳ್ಳಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಿ ಇಲ್ಲವಾದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಮುಂದೆ ಅನಿರ್ದಿಷ್ಟ ಅವಧಿ ಹೋರಾಟವನ್ನು ಈ ಮೇಲ್ಕಂಡ ಗ್ರಾಮಗಳ ಗ್ರಾಮಸ್ಥರ ಜೊತೆಗೆ ರೈತ ಸಂಘ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಷ ಅವರ ಮುಖಾಂತರ ಕೋಲಾರ ಜಿಲ್ಲಾ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ಚುನಾವಣೆ ಯಾವುದಾದರೂ ಒಂದು ಚುನಾವಣೆ ಮಾಡಲು ತುರ್ತ್ತಾಗಿ ಆದೇಶಿಸಬೇಕು ಇಲ್ಲವಾದಲ್ಲಿ ಈ ಮೇಲ್ಕಂಡ ಎಲ್ಲಾ ಗ್ರಾಮಸ್ಥರು ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾಗುತ್ತದೆ ಎಂದು ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ, ಜಿಲ್ಲಾ ಮುಖಂಡ ಲಕ್ಷ್ಮೀನಾರಾಯಣ ಶೆಟ್ಟಿ, ಕೋಲಾರ ತಾಲೂಕು ಅಧ್ಯಕ್ಷ ಜಗನ್ನಾಥ್ ರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ವಿಶ್ವನಾಥ್, ಶ್ರೀನಿವಾಸಪುರ ತಾಲೂಕು, ಅಧ್ಯಕ್ಷ ದೊಡ್ಡ ಕುರುಬರಹಳ್ಳಿ ಶಂಕರೇಗೌಡ, ಲಾಲ್ ಬಹದ್ದೂರ್‌ಗೌಡ ಭಾಗವಹಿದ್ದರು.