ಜನಪ್ರತಿನಿಧಿಗಯಿಂದ ನಕಲಿ ದಾಖಲೆ ಸೃಷಿ: ದೂರು ದಾಖಲು

ತಿ.ನರಸೀಪುರ.ಮೇ.30: ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕಾದ ಜನಪ್ರತಿನಿಧಿಗಳೇ ನಕಲಿ ದಾಖಲೆ ಸೃಷ್ಟಿಸಿ ಯಾರದ್ದೋ ಜಮೀನನ್ನು ಯಾರಿಗೋ ಮಾರಾಟ ಮಾಡಿರುವ ನಾಚಿಕೆ ಹುಟ್ಟಿಸುವ ಘಟನೆಯೊಂದು ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪಟ್ಟಣ ಪೆÇೀಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕು ಕುರುಬರ ಸಂಘದ ಅಧ್ಯಕ್ಷರೂ ಆಗಿರುವ ಪುರಸಭಾ ಸದಸ್ಯ ಟಿ.ಎಂ.ನಂಜುಂಡಸ್ವಾಮಿ, ಮತ್ತೊಬ್ಬ ಸದಸ್ಯ ತುಂಬಲಾ ಪ್ರಕಾಶ್ ಹಾಗೂ ಇವರಿಬ್ಬರ ಸಹಚರ ರಂಗಸ್ವಾಮಿ ಎಂಬುವರೇ ನಕಲಿ ದಾಖಲೆ ಸೃಷ್ಟಿಸಿ ಅನ್ಯರ ಜಮೀನನ್ನು ಮಾರಾಟ ಮಾಡಿದ ಆರೋಪಕ್ಕೆ ಗುರಿಯಾಗಿರುವವರಾಗಿದ್ದು ಮೂಲ ಜಮೀನಿನ ಮಾಲೀಕರು ಈ ಮೂವರ ವಿರುದ್ಧ ಪಟ್ಟಣ ಪೆÇೀಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ನೀಡಿ ಮಾತನಾಡಿದ ಅಸಲಿ ಜಮೀನಿನ ಹಕ್ಕುದಾರರಾದ ಲೇಟ್ ಹೊಟ್ಟೆ ಮಾದೇಗೌಡರ ಮಗ ನಾಗರಾಜು ತಾಲೂಕಿನ ಭೈರಾಪುರ ಗ್ರಾಮದ ಸರ್ವೇ ನಂ.31/2ಎ ಪೆÇೀಡಿನ ಪೈಕಿ 0.06 ಗುಂಟೆ ಜಮೀನನ್ನು ನಮ್ಮ ತಂದೆ ಹೊಟ್ಟೆ ಮಾದೇಗೌಡರು 1995 ರಲ್ಲಿ ಎಂ.ವಿ.ನಾಗರಾಜ ಶೆಟ್ಟಿ ಎಂಬುವರಿಗೆ ಕ್ರಯ ಮಾಡಿಕೊಟ್ಟಿದ್ದು,ತದ ನಂತರ ಮತ್ತೆ ನಾವೇ ಅವರಿಂದ ಅವರಿಗೆ ಸಲ್ಲಿಕೆ ಯಾಗ ಬೇಕಾದ ಹಣ ಪಾವತಿಸಿ ನಮ್ಮ ಜಮೀನನ್ನು ನಮ್ಮ ಸುಪರ್ದಿಗೆ ಪಡೆದುಕೊಂಡಿದ್ದು ,ಇನ್ನೂ ಖಾತೆ ಮಾಡಿಸಿಕೊಂಡಿರುವುದಿಲ್ಲವಾದರೂ ನಾವೇ ಸ್ವಾದೀನದಲ್ಲಿರುತ್ತೇವೆ.ಇದಕ್ಕೆ ಸಂಬಂಧಿಸಿದಂತೆ ಎಂ.ವಿ.ನಾಗರಾಜ ಶೆಟ್ಟರು ನನಗೆ ಜಿಪಿಎ ಸಹ ನೀಡಿರುತ್ತಾರೆ.ಇದರಿಂದಾಗಿ 0.06 ಗುಂಟೆ ಜಮೀನಿಗೆ ನಾವೇ ಹಕ್ಕುದಾರರಾಗಿರುತ್ತೇವೆ.
ಆದರೆ ತೀರಾ ಇತ್ತೀಚಿನ ದಿನಗಳಲ್ಲಿ ಪುರಸಭಾ ಸದಸ್ಯ ಟಿ.ಎಂ.ನಂಜುಂಡಸ್ವಾಮಿ, ಸದಸ್ಯ ತುಂಬಲ ಪ್ರಕಾಶ್ ಹಾಗು ಇವರ ಸಹಚರ ರಂಗಸ್ವಾಮಿ ಎಂಬುವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕೊಂಡು ನನ್ನ ಜಮೀನಿನ ಖಾತೆ ಸಂಖ್ಯೆಗೆ ಪುರಸಭೆಯಿಂದ ಅನುಮತಿ ಪತ್ರ ಪಡೆದು ನಕಲಿ ದಾಖಲೆ ಸೃಷ್ಟಿಸಿ 7 ನಿವೇಶನ ಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿ ಅವ್ಯವಹಾರ ನಡೆಸಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ನನ್ನ ಜಮೀನನ್ನು ಬಂದೋ ಬಸ್ತ್ ಮಾಡಲು ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದರು.
ಶಾಸಕರ ಮನೆ ಮುಂದೆ ವಿಷ ಕುಡಿಯುವೆ
ನಾನು ಆರ್ಥಿಕವಾಗಿ ಸ್ಥಿತಿವಂತನಾಗಿಲ್ಲ.ನನ್ನ ಜೀವನಕ್ಕೆ ಇರುವುದು ಇದೊಂದೆ ಆಸ್ತಿ.ನನ್ನ ಮಕ್ಕಳ ವಿದ್ಯಾಬ್ಯಾಸದ ಮೂಲ ಸಹ ಇದೇ ಜಮೀನೇ ಆಗಿರುವುರಿಂದ ಜನ ಪ್ರತಿನಿಧಿಗಳು ಮಾಡುತ್ತಿರುವ ಅನ್ಯಾಯ ಸಹಿಸಲಾಗುತ್ತಿಲ್ಲ.ಇರುವ ಸ್ವಲ್ಪ ಜಮೀನು ಸಹ ಅನ್ಯರ ಪಾಲಾಗಿ,ನನಗೆ ನ್ಯಾಯ ದೊರಕದಿದ್ದಲ್ಲಿ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯರ ಮನೆ ಮುಂದೆ ವಿಷ ಕುಡಿದು ಪ್ರಾಣ ಬಿಡುತ್ತೇನೆ ಎಂದ ನಾಗರಾಜು ಕಣ್ಣೀರು ಹಾಕಿದರು.