ಜನಪರ ಯೋಜನೆ ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 8-: ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ರದ್ದು ಗೊಳಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಬಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎಪಿಎಂಸಿ, ಕಾಯ್ದೆ, ರೈತ ವಿದ್ಯಾನಿಧಿ ಯೋಜನೆ, ಜಿಲ್ಲೆಗೊಂದು ಗೋಶಾಲೆ, ಭೂಸಿರಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತರ ಶಕ್ತಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಸ್ತ್ರೀ ಶಕ್ತಿ ಯೋಜನೆ, ಹಂಪಿ ಶುಗರ್ಸ್ ಕಾರ್ಖಾನೆ ರದ್ದು ಸೇರಿದಂತೆ ಹಲವು ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಬಾಗಳಿ ಕೊಟ್ರೇಶಪ್ಪ ಹಾಗೂ ಮಂಡಲ ಅಧ್ಯಕ್ಷ ಕಸಟ್ಟಿ ಉಮಾಪತಿ ನೇತೃತ್ವದಲ್ಲಿ ಸಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಮೀರಾಬಾಯಿ, ಚಿದಾನಂದ ಸೂಗೂರು, ಜೀವರತ್ನಂ, ರೇಖಾ ರಾಣಿ, ಹೊನ್ನೂರಪ್ಪ, ತಿರಮಲೇಶ್, ನಾಗೇಂದ್ರ, ಸಂಧ್ಯಾ, ರೇಣುಕಾ ಹಾಗೂ ದಯಾನಂದ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.