ಜನಪರ ಯೋಜನೆ ಎಲ್ಲರಿಗೂ ತಲುಪುವಂತಾಗಲಿ-ಪಾಟೀಲ

ಲಕ್ಷ್ಮೇಶ್ವರ, ನ 20- ಕೇಂದ್ರದಲ್ಲಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ ಎಂದು ವಿಭಾಗೀಯ ಪ್ರಶಿಕ್ಷಣ ಸಂಚಾಲಕ ಲಿಂಗರಾಜ ಪಾಟೀಲ ಹೇಳಿದರು.
ಅವರು ಪಟ್ಟಣದ ಬಿ.ಸಿ.ಎನ್. ಪಾಲಿಟೆಕ್ನಿಕ್ ಸಭಾಭವನದಲ್ಲಿ ಜರುಗಿದ ಎರಡು ದಿನಗಳ ಕಾಲ ಶಿರಹಟ್ಟಿ ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪದಲ್ಲಿ ಭಾವಿಸಿ ಮಾತನಾಡಿ ಅವರು ಬಿಜೆಪಿ ಜಗತ್ತಿನಲ್ಲಿಯೇ ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿ ಬೆಳೆದಿದ್ದು ಮೋದಿಯವರು ದೇಶಕ್ಕಾಗಿ ಹಗುಲಿರುಳು ದುಡಿಯುತ್ತಿದ್ದು ಇತರೆ ರಾಷ್ಟ್ರಗಳು ಭಾರತದ ಪ್ರಗತಿಯನ್ನು ಕೌತುಕದಿಂದ ನೋಡುತ್ತಿವೆ.
ಕಾರ್ಯಕರ್ತರೆ ಪಕ್ಷದ ಬೆನ್ನೆಲುಬು ಆಗಿದ್ದು ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಶಿಸ್ತಿನಿಂದ ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಿಷ್ಠ ಗೊಳಿಸಬೇಕು.
ಭಾರತ ಜಗತ್ತಿನ ವಿಶ್ವದ ಗುರು ಆಗಲಿದ್ದು ಜಗತ್ತಿನ ಬಹುತೇಕ ರಾಷ್ಟ್ರಗಳು ಒಂದಿಲ್ಲ ಒಂದು ರೀತಿಯಲ್ಲಿ ಮೋದಿ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದು ಮೋದಿಯವರ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ದೇಶದ ಜನರ ಮನ್ನಣೆ ಗಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಸಂಚಾಲಕ ನಾರಾಯಣ್ ಜರ್ತಾರ್ಕರ್, ಶ್ರೀಪತಿ ಉಡುಪಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಶಿರಹಟ್ಟಿ ಮಂಡಳ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಉಳವೇಶ ಗೌಡ ಪಾಟೀಲ್, ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಸಂತೋಷ ಜಾವೂರ ಸೇರಿ ಅನೇಕರು ಇದ್ದರು.