ಜನಪರ ಯೋಜನೆಗಳಿಗೆ ಜನಪರಆಶೀರ್ವಾದ ಲಿಂಬಾವಳಿ

ಕೆ.ಆರ್.ಪುರ, ಏ.೩- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳಿಗೆ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದಾರೆ ಎಂದು ಶಾಸಕ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಬಿಜೆಪಿ ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಿಗಬೇಕಾದ ಎಲ್ಲಾ ಗೌರವ ಸಿಗುತ್ತದೆ ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ ಹಳಬರು , ಹೊಸಬರು ಎಂದು ಬೇಧ ಭಾವ ನೋಡುವುದಿಲ್ಲ ಎಂದು ಹೇಳಿದರು.
ನಮ್ಮ ಅಭಿವೃದ್ಧಿ ಮೆಚ್ಚಿ ಬಿದರಹಳ್ಳಿ ಪಂಚಾಯತಿ ಅಧ್ಯಕ್ಷ ಬಿ.ಜಿ.ರಾಜೇಶ್, ಕಣ್ಣೂರು ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್ ಹಾಗೂ ನಂಜುಂಡ ಅವರ ನೇತೃತ್ವದಲ್ಲಿ ಬೈರತಿ ಬಂಡೆಯ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ನಾಗರಾಜ್, ಕುಮಾರ್, ಪಳನಿ, ಸುರೇಶ್ ಪಟೇಲ್ , ವಿಘ್ನೇಶ್ ಸೇರಿಂದತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು ಪಕ್ಷ ಬಲಪಡಿಸುವಂತೆ ಸೂಚಿಸಿದರು.
೪೦ ದಿನ ಕಾರ್ಯಕರ್ತರು ಕೆಲಸ ಮಾಡಿದರೆ ಐದು ವರ್ಷ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷ ನಟರಾಜ್, ಗ್ರಾಪಂ ಅಧ್ಯಕ್ಷ ರಾಜೇಶ್ , ಮಾಜಿ ಜಿಪಂ ಸದಸ್ಯ ಗಣೇಶ್, ಭೂ ನ್ಯಾಯ ಮಂಡಳಿ ಸದಸ್ಯ ಮಧುಕುಮಾರ್ , ಮುಖಂಡರಾದ , ಕಣ್ಣೂರು ಅಶೋಕ್, ಜ್ಯೋತಿಪುರ ವೇಣು ಮತ್ತಿತರರಿದ್ದರು.