ಜನಪರ ಯೋಜನೆಗಳಿಂದ ಜನರ ಮನ ಗೆದ್ದ ಮೋದಿ;ಗದ್ದಿಗೌಡರ

ಬಾದಾಮಿ, ಮೇ 31: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿರುವ ಕಾರಣ ಸಂಭ್ರಮಾಚರಣೆ ಮಾಡದೇ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಅವರು ನರೇಂದ್ರ ಮೋದಿಯವರು ಪ್ರಧಾನಿಯಾಗಿ 7 ವರ್ಷ(ಎರಡನೇ ಅವಧಿಗೆ ಎರಡು ವರ್ಷ) ಪೂರ್ಣಗೊಂಡ ಪ್ರಯುಕ್ತ ರವಿವಾರ ಬಿಜೆಪಿ ಮಂಡಳದ ವತಿಯಿಂದ ತಾಲೂಕಿನ ಚೊಳಚಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನಧನ, ಪಿ.ಎಂ.ಕಿಸಾನ್, ಉಜ್ವಲ, ಪಿ.ಎಂ.ಜೀವನಭೀಮಾ ಯೋಜನೆ ಸೇರಿದಂತೆ 75 ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭಾರತ ದೇಶವನ್ನು ಎಲ್ಲ ರಂಗಗಳಲ್ಲಿ ಮುಂದುವರೆಯುವಂತೆ ಮಾಡಿ ಇಡೀ ಜಗತ್ತು ಭಾರತ ದೇಶದತ್ತ ನೋಡುವಂತೆ ಮಾಡಿದ್ದಾರೆ. ಸಸಿ ನೆಡುವದು, ರಕ್ತದಾನ ಶಿಬಿರ ಸೇರಿದಂತೆ ಕೊರೊನ ಸಂಕಷ್ಟದಲ್ಲಿ ಉಚಿತ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜನರ ಕಷ್ಟದಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಿಜೆಪಿ ಮುಖಂಡರು ಹಾಜರಿದ್ದರು.