ಜನಪರ ಕಾರ್ಯಗಳಿಗಾಗಿ ಬಿಜೆಪಿಗೆ ಮತ ನೀಡಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,17- ನಗರದ 11 ನೇ ವಾರ್ಡ್ ನ ಫ್ಲವರ್ ಸ್ಟ್ರೀಟ್, ಬೆಂಗಳೂರು ರಸ್ತೆ, ಕಮ್ಮಿಂಗ್ ರಸ್ತೆ ಮತ್ತಿತರ ಕಡೆಗಳಲ್ಲಿ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಬಿರುಸಿನ  ಪ್ರಚಾರ ನಡೆಸಿದರು.
ಈ ವೇಳೆ ಮತದಾರರನ್ನು ಭೇಟಿ ಮಾಡಿ  ಜನಪರ ಕಾರ್ಯಗಳಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೋರಿದರು. ಹಣ್ಣು ತರಕಾರಿ ಮಾರುವವರನ್ನು ಮಾತನಾಡಿಸಿ. ಸಣ್ಣ ಮಾರುಕಟ್ಟೆ ಪ್ರದೇಶದಲ್ಲಿ ನೂತನ‌ ಮಾರುಕಟ್ಟೆ ನಿರ್ಮಿಸುವ ಯೋಜನೆ ಬಗ್ಗೆ ವಿವರಿಸಿ. ಇಂತಹ ಯೋಜನೆಗಳು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ರಾಜೀವ್ ತೊಗರಿ ಮೊದಲಾದ ಮುಖಂಡರು, ಕಾರ್ಯಕರ್ತರು ಇದ್ದರು.