ಜನಪರ ಆಡಳಿತ ನನ್ನ ಕನಸು ನಾರಾ ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,7- ಜನಪರ ಆಡಳಿತ, ಸುಂದರ ಸ್ವಚ್ಛ ನಗರ ಇವು ನನ್ನ ಆದ್ಯತೆ ಹಾಗೂ ಕನಸುಗಳು ಎಂದು ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದರು.
ಅವರು  ನಗರದ  ವಿವಿಧ  ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದ  ಸ್ಥಳೀಯರನ್ನುದ್ಧೇಶಿಸಿ ಮಾತನಾಡಿದರು.
ಇಷ್ಟು ವರ್ಷಗಳಾದರೂ  ನಗರದಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳು ಇಲ್ಲ. ನಗರವನ್ನು ಸ್ವಚ್ಛ, ಸುಂದರ ನಗರವಾಗಿ ರೂಪಿಸುವುದು ನನ್ನ ಗುರಿ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸರ್ಕಾರಿ ಅಧಿಕಾರಿಗಳು ವರ್ಗಾವಣೆ ದಂಧೆಗೆ ಬಲಿಯಾಗಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವೆ ಎಂದರು.
ಬಳ್ಳಾರಿ ನಗರ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ನಗರ ಹೀಗಾಗಿ ಉತ್ತಮ ಕಾನೂನು ಸುವ್ಯಸ್ಥೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಪಕ್ಷದ  ಮುಖಂಡರಾದ ಮೊಹಮ್ಮದ್, ಪರಶುರಾಮ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.