ಜನಪರ ಆಡತಕ್ಕೆ ರವಿಕುಮಾರ್ ಒತ್ತಾಯ

ಗೌರಿಬಿದನೂರು, ನ.೬: ನಗರಸಭೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರವನ್ನು ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಫಂದಿಸಿ ಜನಪರವಾದ ಆಡಳಿತ ನೀಡಿ ಸಮುದಾಯದ ಗೌರವವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹಿಂದೂ ಕ್ಷೇಮಾಭಿವೃದ್ಧಿ ಕೇಂದ್ರ ಘಟಕದ ಅಧ್ಯಕ್ಷ ಡಿ.ಇ.ರವಿಕುಮಾರ್ ತಿಳಿಸಿದರು.
ನಗರಸಭೆಯ ನೂತನ ಅಧ್ಯಕ್ಷರಾದ ಕೆ.ಎಂ.ಗಾಯತ್ರಿ ರವರನ್ನು ಹಿಂದೂ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂಧಿಸಿ ಅವರು ಮಾತನಾಡಿದರು. ನಗರಸಭೆಯ ಮೊದಲ ಪ್ರಜೆಯಾಗಿ ಸಮುದಾಯದವರು ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ೩೧ ವಾರ್ಡ್ ಗಳಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಅವರೊಂದಿಗೆ ಭಾಂದವ್ಯವನ್ನು ಹೊಂದುವ ಮೂಲಕ ತಮ್ಮ ಅಧಿಕಾರವನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕಾಗಿದೆ. ಸಮುದಾಯವು ಸದಾ ನಿಮ್ಮ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಸಹಕಾರ ನೀಡಲಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭೆ ನೂತನ ಅಧ್ಯಕ್ಷೆ ಕೆ.ಎಂ.ಗಾಯತ್ರಿ, ಅಧಿಕಾರವು ಎಂದಿಗೂ ಶಾಶ್ವತವಲ್ಲ, ಇರುವ ಅತ್ಯಲ್ಪ ಅವಧಿಯಲ್ಲಿ ಮಾಡುವ ಜನಪರವಾದ ಅಭಿವೃದ್ಧಿ ಕಾರ್ಯಗಳೇ ಶಾಶ್ವತವಾಗಿ ಉಳಿದು ಸಮುದಾಯದ ಏಳಿಗೆಗೆ ಸಹಕಾರಿಯಾಗಲಿವೆ. ನನ್ನ ಅಧಿಕಾರ ಅವಧಿಯಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಜನರ ಸಂಕಷ್ಟಗಳಿಗೆ ಸ್ಫಂಧಿಸುವ ಜತೆಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇನೆ. ನಿಮ್ಮೆಲ್ಲರ ಸಹಕಾರಕ್ಕೆ ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಮುಖಂಡರಾದ ಕೆ.ವಿ.ನಂಜುಂಡಗೌಡ, ಕೇಂದ್ರ ಸಂಘದ ಖಜಾಂಚಿ ಜಿಕೆ.ರಮೇಶ್ ಕುಮಾರ್, ನಿರ್ದೇಶಕರಾದ ರವಿ, ಶಿವಶಂಕರ್, ಮಂಜುಳಾದೇವಿ, ಬಿ.ಮಂಜುನಾಥ್, ಶಾಂತಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿ.ಎಚ್.ದೇವರಾಜಯ್ಯ, ಹೊನ್ನಪ್ಪ, ಗಂಗಲಕ್ಷ್ಮಮ್ಮ, ಜಿ.ಸಿ.ಸತೀಶ್, ಬಿ.ಎನ್.ಮಂಜುನಾಥ್, ವಿ .ಚಂದ್ರಶೇಖರ್, ಸಂಕೇತ್ ಶ್ರೀರಾಮ್, ಶ್ರೀನಿವಾಸ್, ರವಿಕುಮಾರ್, ಅರುಣ್, ಕೆ.ಆರ್.ಸಪ್ತಗಿರಿ, ರವೀಂದ್ರ, ವೆಂಕಟಪ್ಪ, ರಾಜಣ್ಣ ಭಾಗವಹಿಸಿದ್ದರು.