ಜನಪರ ಅಭಿವೃದ್ಧಿಯ ಕಾಳಜಿಯ ಶಾಸಕರು ನೂರ್ಕಾಲ ಬಾಳಲಿ ಅಭಿಮಾನಿಗಳ ಹಾರೈಕೆ

ಶಹಾಪುರ:ಮಾ.5:ಸದಾಕಾಲ ಜನರ ಮಧ್ಯೆ ಇದ್ದು, ಹತ್ತು ಹಲವು ಸಮಸ್ಯೆಗಳಿಗೆ ಕಾಳಜಿ ಪೂರಕವಾಗಿ ಸ್ಪಂದಿಸುತ್ತಿರುವ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸರ್ವ ಸಮುದಾಯಗಳ ವಿಶ್ವಾಸದ ಧೀಮಂತ ನಾಯಕರಾಗಿದ್ದಾರೆ ಎಂದು ಯುವ ಮುಖಂಡ ಉದ್ಯಮಿ ಗುರು ಮಣಿಕಂಠ ಅವರು ತಿಳಿಸಿದರು.
ನಗರದ ಹಳೆಪೇಟೆಯ ಜ್ಞಾನಗಂಗೋತ್ರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದರ್ಶನಾಪುರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ಅಭಿವೃದ್ಧಿಯ ಕಳಕಳಿ ಹೊಂದಿ ಉತ್ತಮವಾದ ಆಲೋಚನೆಗಳ ಮೂಲಕ ನಗರ ಹಾಗೂ ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡುವುದರ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ನಾಯಕರಾದ ಅವರು ನೂರ್ಕಾಲ ಸುಖವಾಗಿ ಬಾಳಲಿ, ಅವರ ಸೇವೆ ಹೆಚ್ಚು ಹೆಚ್ಚು ಈ ಭಾಗಕ್ಕೆ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಹುಟ್ಟು ಹಬ್ಬದ ಪ್ರಯುಕ್ತ ಗೋಶಾಲೆಯಲ್ಲಿ ಮೇವು ವಿತರಣೆ, ಆಸ್ಪತ್ರೆಯಲ್ಲಿ ಜನರಿಗೆ ಹಣ್ಣು ಹಂಪಲು ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಅಭಿಮಾನಿ ಬಳಗ ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ ಎಂದರು.
ನಗರಸಭೆ ಸದಸ್ಯ ಬಸವರಾಜ ಚನ್ನೂರ್ ಮಾತನಾಡಿ, ನಾಯಕರಾಗಿರುವ ದರ್ಶನಾಪುರವರ ಹುಟ್ಟುಹಬ್ಬ ಯಾವುದೇ ಆಡಂಬರವಿಲ್ಲದೆ ಅರ್ಥಪೂರ್ಣವಾಗಿ ಸಮಾಜಮುಖಿಯಾಗಿ ಆಚರಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಘಟಕದ ಯುವ ಅಧ್ಯಕ್ಷ ಮೌನೇಶ್ ನಾಟೇಕಾರ, ಮಡಿವಾಳಪ್ಪ ಪಾಟೀಲ್ ಅವರನ್ನು ಹಾಗೂ ಅರ್ಚಕರಾದ ವಿಠಲಾಚಾರ್ಯ ಪ್ರತಿನಿಧಿ, ಕೋನೇರಾಚಾರ್ಯ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮಹೇಶ ಮಡಿವಾಳ್ಕರ್, ಆಪ್ತಸಹಾಯಕ ಶಿವಶರಣ ಇಟಗಿ, ಶಾಂತುಪಾಟೀಲ, ರಾಜು ಆನೆಗುಂದಿ, ಮಲ್ಲಯ್ಯ ಸ್ವಾಮಿ ಇಟಗಿ, ಸಿದ್ದು ಮುಂಡಾಸ, ಶರಣು ಪಾಟೀಲ್, ಧರ್ಮಣ್ಣ, ಸಂಗನಗೌಡ, ಅನಿಲ, ಮಹೇಶ, ನಿಂಗು ದೇಶಮುಖ, ರಾಜು ಚಂದಾಪುರ, ರಾಜು ರಸ್ತಾಪುರ, ಧರ್ಮಣ್ಣ, ಬಸ್ಸು, ಲಕ್ಷ್ಮಣ ದೇವಿನಗರ, ರಾಮಣ್ಣ ಸೇರಿದಂತೆ ಅನೇಕರು ಇದ್ದರು