ಜನಪರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಬಾದರ್ಲಿ

ಸಿಂಧನೂರು,ಜ.೧೦- ಜನಪರ ಕೆಲಸ ಮಾಡದೆ ಕಮೀಷನ್ ಹಣ ಪಡೆಯುವ ಮೂಲಕ ಬಿಜೆಪಿಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ೨೦೨೩ ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೆ ಜನಪರ ಅಭಿವೃದ್ಧಿಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸನಗೌಡ ಬಾದರ್ಲಿ ಜನರಲ್ಲಿ ಮನವಿ ಮಾಡಿಕೊಂಡರು.
ತಾಲೂಕಿನ ಒಳಬಳ್ಳಾರಿ ರಸ್ತೆಯಲ್ಲಿರುವ ಜೋಳದ ರಾಶಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಯುವಕ-ಯುವತಿಯರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣ, ರೈತರ ಮಹಿಳೆಯರು ಸೇರಿದಂತೆ ತಾಲೂಕಿನ ಜನರ ಕಷ್ಟ ನಿವಾರಿಸುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಮಾಡಲಾಗುತ್ತಿದೆ ಎಂದರು.
ಉದ್ಬಾಳ ಗೋಮರ್ಸಿ, ಮಾಡಶಿರವಾರ, ಬೆಳಗುರ್ಕಿ, ಅಲಬನೂರ ತನಕ ಪಾದಯಾತ್ರೆ ಮಾಡಿ ರಾತ್ರಿ ಅಲಬನೂರ ಗ್ರಾಮದಲ್ಲಿ ಮಲಗಲಿದ್ದಾರೆ. ಸಿಂಧನೂರುದಿಂದ ಅಂಬಾಮಠದವರೆಗೆ ಮೊದಲ ಪಾದಯಾತ್ರೆ ನಡೆಸಿ ದಿದ್ದಿಗಿಯಿಂದ ಹೆಡಗಿನಾಳ ತನಕ ಎರಡನೆಯ ಹಂತದ ಪಾದಯಾತ್ರೆ ಮುಗಿಸಿ, ಈಗ ಮೂರನೇ ಹಂತದ ಪಾದಯಾತ್ರೆಯನ್ನು ಬಸನಗೌಡ ಬಾದರ್ಲಿ ಆರಂಭ ಮಾಡಿದ್ದಾರೆ.
ಪಾದಯಾತ್ರೆಯ ಮೂಲಕ ಬಸನಗೌಡ ಬಾದರ್ಲಿ ಹಳ್ಳಿಗಳಲ್ಲಿ ಹೋದಾಗ ಜನ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಮುಂದಿನ ಕಾಂಗ್ರೆಸ್ ಅಭ್ಯರ್ಥಿ ನಾನು ಎನ್ನುವ ರೀತಿಯಲ್ಲಿ ಬಸನಗೌಡ ಬಾದರ್ಲಿ ಪಾದಯಾತ್ರೆಯ ನೆಪದಲ್ಲಿ ಅಬ್ಬರದ ಚುನಾವಣೆಯ ರಣತಂತ್ರದ ಬಾಗವೆ ಈ ಪಾದಯಾತ್ರೆಯಾಗಿದೆ ಎನ್ನುವದು ಎದುರಾಳಿಗಳಿಗೆ ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷದ ಮುಖಂಡರಾದ ಸೋಮನಗೌಡ ಬಾದರ್ಲಿ, ಶಿವಕುಮಾರ ಜವಳಿ, ವೆಂಕಟೇಶ ನಾಯಕ, ಹಂಪಮ್ಮ, ವಿರೇಶ, ದೇವಪ್ಪ, ಯುನೀಷ ಪಾಷಾ, ಮಲ್ಲಯ್ಯ ಮ್ಯಾಕಲ್ ಖಾಜಾಹುಸೇನ್ ರೌಡಕುಂದ, ಬಾಲಾಜಿ, ನಿರುಪಾದಪ್ಪ ಸ್ವಾಮಿ, ಉಮೇಶ, ಹಂಪಯ್ಯ, ಈರಣ್ಣ, ವೆಂಕಟೇಶ ಸೇರಿದಂತೆ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.