ಜನಪದ ಸಾಹಿತ್ಯ ಬೆಳೆಯುವಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು

ರಾಯಚೂರು.ನ.೨೨-ಜಾನಪದ ಸಾಹಿತ್ಯವು ಎಲ್ಲಾ ಸಾಹಿತ್ಯಗಳ ಬೇರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ಇಂತಹ ಸಾಹಿತ್ಯ ಬೆಳೆಯಲು ಪ್ರಮುಖ ಪಾತ್ರ ವಹಸಿದ್ದರು. ಅದರಲಿಯೂ ಸಹ ಮಹಿಳೆಯರು ತಮ್ಮ ದಿನ ನಿತ್ಯದ ಬದುಕಿನಲ್ಲಿ ಹಲವಾರು ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಹೆಚ್ಚು ಜನಪದ ಗೀತೆಗಳನ್ನು ಬಳಸಿ ಈ ಸಾಹಿತ್ಯದ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ತರವಾಗಿದೆ.
ಕುಟ್ಟುವುದು, ಬೀಸುವುದು ಹಾಗೂ ನಾಮಕರಣ, ಮುವೆ ಸಮಾರಂಭದಂತಹ ಶುಭಕಾರ್ಯಗಳಲ್ಲಿ ಜಾಣಪದ ಹಾಡುಗಳನ್ನು ಹೆಚ್ಚಾಗಿ ಹಾಡುತ್ತಾರೆ ಕನ್ನಡ ಭವನದಲ್ಲಿ ಜರುಗಿದ ಜಿಲ್ಲಾ ಮಹಿಳಾ ಘಟಕ ಹಾಗೂ ತಾಲೂಕ ಘಟಕಗಳ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ರಾಜ್ಯ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಯಚೂರು ಜಿಲ್ಲಾ ಅಧ್ಯಕ್ಷರು ಹಾಗೂ ಕಲಬುರಗಿ ವಿಭಾಗೀಯ ಸಂಚಾಲಕರಾದ ಡಾ.ಶರಣಪ್ಪ ಗೋನಾಳ ಮಾತನಾಡುತ್ತಾ ಇಡೀ ರಾಜ್ಯದಲ್ಲಿ ಪ್ರಥಮವಾಗಿ ರಾಯಚೂರಿನಲ್ಲಿ ಜಿಲ್ಲಾ ಮಹಿಳಾ ಘಟಕ, ತಾಲೂಕು ಮಹಿಳಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಿ ಜಿಲ್ಲೆಗೆ ಮೆರುಗು ತರುವುದರ ಕೆಲಸ ಮಾಡೋಣ ಎಂದರು. ಸಂಘದ ಪ್ರದಾನ ಕಾರ್ಯದರ್ಶಿಯಾದ ದಂಡಪ್ಪ ಬಿರಾದಾರರವರು ಮಾತನಾಡುತ್ತಾ ರಾಯಚುರು ಜಿಲ್ಲೆ ತನ್ನದೇ ಆದ ಐತಿಹಾಸಿಕ ಜಾನಪದ ಬೀಡಾಗಿದೆ. ಹಲವಾರು ಜಾಣಪದ ಕಲಾವಿದರು. ನಮ್ಮ ಜಿಲ್ಲೆಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಜಾಣಪದ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಾಗಿ ಮಾಡಿ ಉಳಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಪರಮ ಪೂಜ್ಯ ಶ್ರೀಸೂಗೂರಯ್ಯ ತಾತನವರು ಗುರ್ಜಾಲ ಈ ಮ ಜಾಣಪದ ಘಟಕವು ಇಂದು ಉದ್ಘಾಟನೆಗೊಂಡಿದೆ. ಇನ್ನೂ ಮುಂಬರುವ ದಿನಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಲಿ ಅದಕಜ್ಕೆ ಮಠದ ಸಹಖಾರವಿರುತ್ತದೆ ಎಂದು ಹೇಳಿದರು.
ನೂತನ ಜಿಲ್ಲಾ ಮಹಿಳಾ ಘಟಕದ, ತಾಲೂಕ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ದಾನಮ್ಮನವರಿಗೆ ನೀಡಿ ನಂತರ ಪದಗ್ರಹಣ ಕಾರ್ಯಕ್ರಮವನ್ನು ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯಾದ ಜಾನಪದ ಯೋಗಿ ಸಿಂಪಿ ಲಿಂಗಣ್ಣ ಪ್ರಶಸ್ತಿಯನ್ನು ಖ್ಯಾತ ಜಾನಪದ ಕಲಾವಿದರಾದ ಶ್ರೀ ಸವಾರಪ್ಪ ಅವರಿಗೆ ಈ ಪ್ರಶಸ್ತಿಯನ್ನು ಗಣ್ಯರು ಪ್ರಧಾನ ಆಂಡಿದರು ಈ ಪ್ರಶಸ್ತಿಯನ್ನು ಶ್ರೀ ಕೆ.ಸಿ. ಖಾಂತಪ್ಪ ದತ್ತಿನಿಧಿಯಿಂದ ನಿಡಿ ಗೌಋವಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ದಾನಮ್ಮ ಸುಭಾಷಚಂದ್ರ ಕಡಗಂಚಿ, ಗೌರವಾಧ್ಯಕ್ಷರಾದ ಶ್ರೀಮತಿ ರೇಖಾ ಕೇಶವರೆಡ್ಡಿ, ಕಾರ್ಯಾಧ್ಯಕ್ಷರಾದ ಶ್ರೀಮತಿ ವಿಜಯ ರಾಜೇಶ್ವರಿ ಗೋಪಶೆಟ್ಟಿ, ರಾಮನಗರ ಜಿಲ್ಲಾ ಗಟಕದ ಅಧ್ಯಕ್ಷರಾದ ಕೇಶಿ ಕಾಂತಪ್ಪನವರು ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಅಯ್ಯಪ್ಪಯ್ಯ ಹುಡಾ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾಯದರ್ಶಿಗಳಾದ ಶ್ರೀ ಭೀಮನಗೌಡ ಇಟಗಿ, ದೇವದುರ್ಗ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜಪ್ಪ ಮಡಿವಾಳ, ದೇವದುರ್ಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಹಂಪಮ್ಮ.ವೈ, ರಾಯಚೂರು ಮಹಿಳಾ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು. ರಾಯಚೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಸಿದ್ದಯ್ಯಸ್ವಾಮಿ ಚೇಗುಂಟ ಇವರು , ರಾಜ್ಯಾಧ್ಯಕ್ಷರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಶ್ರೀಮತಿ ಪ್ರತಿಭಾ ಗೋನಾಳ ಮತ್ತು ರಾಘವೇಂದ್ರ ಆಶಾಪೂರು ರವರು ಪ್ರಾರ್ಥನ ಗೀತೆಯನ್ನು ಹಾಡಿದರು. ರಾಯಚುರು ತಾಲೂಕು ಮಹಿಳಾ ಗಟಕದ ಅಧ್ಯಕ್ಷರಾದ ಶ್ರೀಮತಿ ವೈ.ಕೆ.ಯಶೋಧ ಇವರು ಸ್ವಾಗತಿಸಿದರು. ಶ್ರೀ ಮುರಳೀಧರ ಕುಲಕರ್ಣಿ ಪ್ರಶಸ್ತಿ ಪುರಸ್ಕ್ರತರ ಪರಿಚಯ ಮಾಡಿಕೊಟ್ಟರು, ಮಹಿಳಾ ಘಟಕದ ಸುಮಂಗಲಾ ಸಕ್ರಿ ವಂದಿಸಿದರು, ಅಕ್ಕಮಹಾದೇವಿಯವರು ನಿರೂಪಿಸದರು.