
ಕಲಬುರಗಿ, ಅ.30: ಶಿಷ್ಠ ಸಾಹಿತ್ಯಕ್ಕೆ ತಾಯಿಬೇರು, ನಮ್ಮ ದೇಶ ಭಾರತದ ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕøತಿ ಭಾರತೀಯರ ಜೀವಾಳ. ಆಧುನೀಕರಣಕ್ಕೆ ಒಳಗಾಗಿ ನಮ್ಮತನ ಮರೆಯದೆ, ಜನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸಿದರೆ, ನಮ್ಮ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ ಎಂದು ಚಲನ ಚಿತ್ರ ನಟ, ನಿರ್ದೇಶಕ ಡಾ.ಗಂಗಾಧರ ಬಡಿಗೇರ ಹೇಳಿದರು.
ಅಫಜಲಪುರ ತಾಲೂಕಿನ ಗೊಬ್ಬೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ಜಾನಪದ ಪರಿಷತ್’ನ ತಾಲೂಕಾ ಘಟಕದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ’ಯನ್ನು ಉದ್ಘಾಟಸಿ ಮಾತನಾಡುತ್ತಿದ್ದರು.
ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಜನಪದದಲ್ಲಿ ಎಲ್ಲಾ ಮೌಲ್ಯಗಳು ಅಡಗಿವೆ. ನಮ್ಮ ದೇಶದ ಪರಂಪರೆಯ ಪ್ರತಿಬಿಂಬ ಇದರಲ್ಲಿ ಕಾಣಬಹುದಾಗಿದೆ. ವಿದೇಶಿ ಸಂಸ್ಕøತಿಗೆ ಮಾರುಹೋಗದೆ, ನಮ್ಮ ದೇಶದ ಮೂಲ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಜನಪದರು ಶಾಲಾ-ಕಾಲೇಜು ಮೆಟ್ಟಿಲು ಹತ್ತದೆ, ತಮ್ಮ ಹೃದಯಾಂತರಾಳ ಹಾಗೂ ಆತ್ಮಪ್ರಜ್ಞೆಯಿಂದ ರಚಿಸಿದ ಸಾಹಿತ್ಯ ತುಂಬಾ ಸತ್ವಯುತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಾನಪದ ಕಲಾವಿದರಾದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಜಾನೆ, ಬಸವರಾಜ ಭೂಸನೂರ ಅವರಿಗೆ ಸತ್ಕರಿಸಲಾಯಿತು. ನಂತರ ಇದೇ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ತಾಲೂಕಾ ಘಟಕದ ಅಧ್ಯಕ್ಷ ಜಗನಾಥ ಹತ್ತರಕಿ, ಕಸಾಪ ಕಲಬುರಗಿ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ರಾಜಾಸಾಬ್ ಅಂಕಲಗಿ, ಮಹಾದೇವ ಅಮರಗೊಂಡ, ಡಾ.ಆಶಾ ಮೋಳಕೇರಾ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.