ಜನಪದ ಸಂಸ್ಕøತಿ, ಪರಂಪರೆಯ ತಾಯಿ : ಎಂ.ಬಿ.ನಿಂಗಪ್ಪ

ಕಲಬುರಗಿ:ಸೆ.19: ಶಿಷ್ಠ ಸಾಹಿತ್ಯಕ್ಕೆ ತಾಯಿಬೇರು, ನಮ್ಮ ದೇಶ ಭಾರತದ ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕøತಿ ಭಾರತೀಯರ ಜೀವಾಳ. ಆಧುನೀಕರಣಕ್ಕೆ ಒಳಗಾಗಿ ನಮ್ಮತನ ಮರೆಯದೆ, ಜನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸಿದರೆ, ನಮ್ಮ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ. ಜನಪದ ನಮ್ಮ ದೇಶದ ಭವ್ಯ ಸಂಸ್ಕøತಿ, ಪರಂಪರೆಯ ತಾಯಿಯಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ಕಾಳಗಿ ಪಟ್ಟಣದ ಬಸ್ ನಿಲ್ದಾಣ ಸಮೀಪದ ಸಾಗರ ಮಾಲ್‍ನಲ್ಲಿರುವ ಹೆಬ್ಬಾಳದ ಮೆಟ್ರಿಕ್ ನಂತರ ಬಾಲಕರ ಬಿಸಿಎಂ ವಸತಿ ನಿಲಯದಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಮತ್ತು ಕಾಳಗಿ ತಾಲೂಕಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ ಹಾಗೂ ವಸತಿ ನಿಲಯದತ್ತ ಜಾನಪದ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ಜನಪದದಲ್ಲಿ ಎಲ್ಲಾ ಮೌಲ್ಯಗಳು ಅಡಗಿವೆ. ನಮ್ಮ ದೇಶದ ಪರಂಪರೆಯ ಪ್ರತಿಬಿಂಬ ಇದರಲ್ಲಿ ಕಾಣಬಹುದಾಗಿದೆ. ವಿದೇಶಿ ಸಂಸ್ಕøತಿಗೆ ಮಾರುಹೋಗದೆ, ನಮ್ಮ ದೇಶದ ಮೂಲ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಜನಪದರು ಶಾಲಾ-ಕಾಲೇಜು ಮೆಟ್ಟಿಲು ಹತ್ತದೆ, ತಮ್ಮ ಹೃದಯಾಂತರಾಳ ಹಾಗೂ ಆತ್ಮಪ್ರಜ್ಞೆಯಿಂದ ರಚಿಸಿದ ಸಾಹಿತ್ಯ ತುಂಬಾ ಸತ್ವಯುತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಾನಪದ ಗೀತೆಗಳನ್ನು ಹಾಡಲಾಯಿತು. ಉಪನ್ಯಾಸಕ ಅಮರನಾಥ ಶಿವಮೂರ್ತಿ, ಶಿಕ್ಷಕ ಮಹಾದೇವಪ್ಪ ಬಿರಾದಾರ, ವಸತಿ ನಿಲಯದ ವಾರ್ಡನ್ ಬಾಲಾಜಿ ಘಾಟಗೆ, ಸಿಬ್ಬಂದಿಗಳಾದ ಸಂಜುಕುಮಾರ ಹೆಳವರ್, ಸುನಂದಾ, ರೇಣುಕಾ, ಅನಿತಾ, ಪರ್ವಿನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.