ಜನಪದ ಸಂಸ್ಕøತಿಯಿಂದ ಬದುಕು ಸಮೃದ್ಧ

ಕಲಬುರಗಿ,ಆ.25: ಶಿಷ್ಠ ಸಾಹಿತ್ಯಕ್ಕೆ ತಾಯಿಬೇರು, ಭಾರತದ ಭವ್ಯ ಪರಂಪರೆಯನ್ನು ಸಾರುವ ಜನಪದ ಸಂಸ್ಕøತಿ ಭಾರತೀಯರ ಜೀವಾಳ. ಆಧಿನಕರಣಕ್ಕೆ ಒಳಗಾಗಿ ನಮ್ಮತನ ಮರೆಯದೆ, ಜನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸಿದರೆ, ನಮ್ಮ ಬದುಕು ಸುಂದರ ಹಾಗೂ ಸಮೃದ್ಧವಾಗಲು ಸಾಧ್ಯವಿದೆ ಎಂದು ಹಿರಿಯ ಸಾಹಿತಿ ಪ.ಮನುಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ‘ನರೇಂದ್ರ ಪದವಿ ಪೂರ್ವ ಕಾಲೇಜ್’ನಲ್ಲಿ ‘ಕನ್ನಡ ಜಾನಪದ ಪರಿಷತ್’ನ ತಾಲೂಕಾ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ’ಯನ್ನು ಉದ್ಘಾಟಸಿ ಮಾತನಾಡುತ್ತಿದ್ದರು.
ನಮ್ಮ ಪೂರ್ವಜರು ತಮ್ಮ ಕಾಯಕವನ್ನು ಮಾಡುತ್ತಾ, ತಮ್ಮ ಅನುಭವದಿಂದ ರಚಿಸಿದ ಹಾಗೂ ಎಲ್ಲಾ ಸ್ಥರಗಳನ್ನು ಮುಟ್ಟಿದಂತಹ ಸಾಹಿತ್ಯ ಜನಪದ ಸಾಹಿತ್ಯವಾಗಿದೆ. ಸುಂದರ ಬದುಕಿಗೆ ಬೇಕಾದ ಶಾಂತಿ, ಶಿಸ್ತು, ಪ್ರೀತಿ, ಪ್ರೇಮ, ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕøತಿ, ವೈಜ್ಞಾನಿಕ ದೃಷ್ಠಿಕೋನ, ನೈತಿಕ ಮೌಲ್ಯಗಳು ಸೇರಿದಂತೆ ಎಲ್ಲಾ ಅಂಶಗಳು ಜನಪದ ಸಾಹಿತ್ಯ ಒಳಗೊಂಡಿರುವುದು ಗಮನಿಸಿದರೆ, ಜನಪದ ಸಾಹಿತ್ಯದಲ್ಲಿರುವ ಶಕ್ತಿ ತುಂಬಾ ಅದ್ಬುತವಾದದ್ದಾಗಿದೆ ಎಂಬುದು ನಮಗೆ ತಿಳಿದುಬರುತ್ತದೆ. ಜನಪದ ಕಲಾವಿದರೆ ಪ್ರೋತ್ಸಾಹ ನೀಡಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಜನಪದದಲ್ಲಿ ಎಲ್ಲಾ ಮೌಲ್ಯಗಳು ಅಡಗಿವೆ. ನಮ್ಮ ದೇಶದ ಪರಂಪರೆಯ ಪ್ರತಿಬಿಂಬ ಇದರಲ್ಲಿ ಕಾಣಬಹುದಾಗಿದೆ. ವಿದೇಶಿ ಸಂಸ್ಕøತಿಗೆ ಮಾರುಹೋಗದೆ, ನಮ್ಮ ದೇಶದ ಮೂಲ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಜನಪದರು ಶಾಲಾ-ಕಾಲೇಜು ಮೆಟ್ಟಿಲು ಹತ್ತದೆ, ತಮ್ಮ ಹೃದಯಾಂತರಾಳ ಹಾಗೂ ಆತ್ಮಪ್ರಜ್ಞೆಯಿಂದ ರಚಿಸಿದ ಸಾಹಿತ್ಯ ತುಂಬಾ ಸತ್ವಯುತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಾನಪದ ಕಲಾವಿದರಾದ ರಾಜು ಹೆಬ್ಬಾಳ, ರೇವಣಸಿದ್ದಪ್ಪ ಎಂ.ತಳವಾರ, ಜಲಾಲಸಾಬ್ ಮುತ್ಯಾ ಚನ್ನೂರ್, ಶರಣಯ್ಯ ಹಿರೇಮಠ, ಶರಣಪ್ಪ ಪೂಜಾರಿ ಅವರಿಗೆ ಸತ್ಕರಿಸಲಾಯಿತು. ನಂತರ ಇದೇ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಜಾಪ ತಾಲೂಕಾ ಘಟಕದ ಅಧ್ಯಕ್ಷ ದೇವೇಂದ್ರ ಬಿ.ಗುಡುರ್, ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ಮಲ್ಲಿಕಾರ್ಜುನ ಭಾಸಗಿ, ನಬಿಪಟೇಲ್ ಈಜೇರಿ, ಶಾಂತಕುಮಾರ ಯಲಗೂಡ್, ಶಿವಾನಂದ ಶಿಂಪಿ, ಕಲ್ಪನಾರೆಡ್ಡಿ, ಮೌನೇಶ ಸೋಮನಾಥಹಳ್ಳಿ, ವೀರೇಶ ಗೋಗಿ, ಬಸವರಾಜ ಆಂದೋಲಾ ಸೊನ್ನ, ದ್ಯಾವಣ್ಣ ಸೋಮನಾಥಹಳ್ಳಿ, ಸೇವಕಿ ಸರಸ್ವತಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.