ಜನಪದ ಸಂಸ್ಕೃತಿ ಪ್ರತಿನಿಧಿಸುವ ಶಕ್ತಿಕೇಂದ್ರವಾಗಲಿ

ಕೋಲಾರ, ಡಿ.೮: ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಜನಪದ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಾಗೂ ಅಂತರಾಷ್ಟ್ರೀಯ ಕಲಾವಿದರನ್ನು ಕೊಡುವ ಶಕ್ತಿಕೇಂದ್ರವಾಗಲಿ ಎಂದು ರಾಜ್ಯ ಮಟ್ಟದ ಹಿರಿಯ ರಂಗಕರ್ಮಿ ಹಾಗೂ ನಾಟಕ ನಿರ್ದೇಶಕ ಮೈಸೂರಿನ ಸಿ. ಬಸವಲಿಂಗಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಸೋಮವಾರ ಸಂಜೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ, ಪ್ರಕೃತಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿನಾಯಕ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಮೌಡ್ಯತೆಯ ಕುರಿತು ವಿಚಾರ ಸಂಕಿರಣ ಹಾಗೂ ಗಂಗಮ್ಮ ನೀರಿನಾಗ ಜಡೆ ಹೆಣಿತಾವ್ಳೆ ರೂಪಕ ಪ್ರದರ್ಶನ ನಡೆಸಲಾಯಿತು.
ಸಂಜೆ ೭ ಗಂಟೆಯ ನಂತರ ಮಾರ್ಜೇನಹಳ್ಳಿ ಸ್ಮಶಾನದಲ್ಲಿ ಜಮಾವಣೆಗೊಂಡ ಮೌಡ್ಯ ವಿರೋಧಿಸುವ ಬುದ್ಧಿ ಜೀವಿಗಳು, ಕಲಾವಿದರು, ಹೋರಾಟಗಾರರು ಹಾಗೂ ಪ್ರಗತಿಪರರು, ಸ್ಮಶಾನದಲ್ಲೇ ಬಿರಿಯಾನಿ ಬೇಯಿಸಿ ಸೇವಿಸುವ ಮೂಲಕ ದೆವ್ವಗಳು, ಆತ್ಮಗಳು ಎಂಬುವುದೇನು ಇಲ್ಲ, ಅವೆಲ್ಲಾ ಪಟ್ಟಭದ್ರ ಹಿತಾಸಕ್ತಿಗಳ ಕುಟಿಲ ತಂತ್ರವಷ್ಠೆ, ಇಲ್ಲಿ ಊಟ ಮಾಡಿದರೆ ಜೀರ್ಣವೂ ಆಗುತ್ತೆ, ಮಲಗಿದರೆ ನಿದ್ರೆಯೂ ಬರುತ್ತೆ, ಭಯ ಪಡುವ ಯಾವುದೇ ಪವಾಡಗಳು ಇಲ್ಲಿ ನಡೆಯಲಾರವು ಎಂಬ ಸತ್ಯವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಚಿಂತಕರು ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಮಾರ್ಜೇನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಾಯತ್ರಿ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯ ಮುನಿವೆಂಕಟಪ್ಪ, ಜಾನಪದ ಕಲವಿದ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಆರ್.ಮುನಿಸ್ವಾಮಿ, ಎಲ್.ಮುನಿಯಪ್ಪ, ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಎನ್.ನಾರಾಯಣಸ್ವಾಮಿ, ಗುತ್ತಿಗೆದಾರ ವಿ.ಬಾಬು, ಸರ್ಕಾರಿ ನೌಕರರ ಸಂಘದ ಜಿ.ವೆಂಕಟಮುನಿ, ಕಲಾವಿದ ವಿ.ಯಲ್ಲಪ್ಪ, ಈಜಲಈನೆಲ ವೆಂಕಟಾಚಲಪತಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಶಶಿಧರ್, ಹೆ.ಚ್. ಶ್ರೀರಾಂ, ಚಾಣಕ್ಯ, ನವೀನ್ ಕುಮಾರ್ ಮತ್ತು ಗ್ರಾಮಸ್ಥರು ಇದ್ದರು.