ಕಲಬುರಗಿ:ಜು.19:ಗ್ರಾಮೀಣ ಭಾಗದ ಜನಪದ ಕಲಾವಿದರು ಬಡತನ ಜೀವನ ಸಾಗಿಸಿ ಜನಪದ ಜೀವಂತವಾಗಿರಿಸಿದ್ದಾರೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ನುಡಿದರು.
ಕಲಬುರಗಿ ತಾಲೂಕಿನ ತಾಜ ಸುಲ್ತಾನಪುರ ಗ್ರಾಮದ ಚಿನ್ನದಕಂತಿ ಚಿಕ್ಕವರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಶ್ರೀಮಠದ ಸಂಯುಕ್ತ ಆಶ್ರಯದಲ್ಲಿ ಸಮಾಜ ಸೇವಕ ನ್ಯಾಯವಾದಿ ಹಣಮಂತರಾಯ ಅಟ್ಟೂರ ಅವರ 26 ವರ್ಷದ ಸುಧೀರ್ಘ ಸಮಾಜ ಸೇವೆಯ ನಿಮಿತ್ಯ “ಜನಪದ ರಕ್ಷಕ” ಪ್ರಶಸ್ತಿ ನೀಡಿ ಆಶೀರ್ವಚನ ನೀಡುತ್ತಾ ಜನಪದ ಕಲಾವಿದರು ಪತ್ರಿಕೆ ಹಾಗೂ ಮಾಧ್ಯಮದ ಯಾವುದೇ ಪ್ರಚಾರವಿಲ್ಲದೆ ನಿರಂತರವಾಗಿ ಹಗಲಿರುಳು ಸೇವಗೈದ ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಹಲವಾರು ಜನ ಕಲಾವಿದರು ಬಡತನ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಸರಕಾರ ಇಂತಹ ಕಲಾವಿದರನ್ನು ಗುರುತಿಸಿ, ಮಶಾಸನ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಜೊತೆಗೆ ಅವರಿಗಾಗಿಯೇ ಒಂದು ಗ್ಯಾರಂಟಿ ಯೋಜನೆ ಜಾರಿಗೆ ಮಾಡಿ ಕಲಾವಿದರ ಬಾಳಿಗೆ ಬೆಳಕಾಗಲಿ. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಟ್ಟೂರರು ಯಾವುದೇ ಪ್ರಚಾರ ಬಯಸದೆ ಸಮಾಜ ಸೇವೆ ಹಾಗೂ ಹೋರಾಟ ಮಾಡಿ ಎಲ್ಲೊ ಇರುವ ಕಲಾವಿದರನ್ನು ಗೌರವಿಸಿ ವೇದಿಕೆ ಕೊಟ್ಟು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಾ ನಿಜವಾದ ಸಮಾಜ ಸೇವಕರಾಗಿದ್ದಾರೆ. ಸಂಘವು ಹಮ್ಮಿಕೊಂಡಿರುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸರ್ವರಿಗೂ ಮಾದರಿಯಾಗಲಿ ಎಂದು ಮಾರ್ಮಿಕವಾಗಿ ನುಡಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಲವಾರು ಜನ ಕಲಾವಿದರಿಗೆ “ಜನಪದ ರಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕøತರಾದ ಜಂಬಗಾ (ಬಿ) ಗ್ರಾಮದ ಬಸವರಾಜ ಪೆÇಲೀಸ ಪಾಟೀಲ, ಮಾಶಾಳ ಗ್ರಾಮದ ಬಸಣ್ಣಾ ವಗ್ಗಾಲೆ, ಜನಪದ ಕಲಾವಿದ ರಾಜು ಹೆಬ್ಬಾಳ, ತಾಜ ಸುಲ್ತಾನಪುರ ಗ್ರಾಮದ ರೇವಣಸಿದ್ದಯ್ಯ ಸ್ವಾಮಿ ಬೇಲೂರ, ನಾಗೇಂದ್ರಪ್ಪಾ ನಾಗೂರ, ಲಕ್ಷ್ಮಿಬಾಯಿ ಮಡಿವಾಳ, ಶ್ರೀಕಾಂತಮ್ಮ ಮಡಿವಾಳ, ಮಹಾದೇವಿ ಚಿಮಾಣಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವಶರಣಪ್ಪಾ ಹಿರೇಮನಿ, ರವಿಕುಮಾರ ಶಹಪುರಕರ, ಬಾಬುರಾವ ಕಲಕೋರಿ, ನಾಗೇಂದ್ರ ದೇಗಲಮಡ್ಡಿ, ವೀರಯ್ಯ ಬಾಳಿ, ಭೀಮಾಶಂಕರ ಹಾಂವಾ, ಹಣಮಂತರಾಯ ಅಟ್ಟೂರ, ಮಲ್ಲಿಕಾರ್ಜುನ ಮುದ್ದಾಳ, ವಿಠ್ಠಲ ಕುಂಬಾರ, ಚಂದ್ರಕಾಂತ ಚಿತಪಳ್ಳಿ, ವಿಠಾಬಾಯಿ ಅಟ್ಟೂರ, ಯಶವಂತರಾವ ಭೂತೆ, ಸಂಗೀತಾ ಹಂಗರಗಿ, ರಾಮೇಶ್ವರಿ ಅಟ್ಟೂರ, ಕಾಂಚನಾ ಹಂಗರಗಿ, ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಪ್ರತಿಭೆಯ ಮೂಲಕ ಕಲೆಯನ್ನು ಪ್ರದರ್ಶನ ಗೊಳಿಸಿ ನೆರೆದವರನ್ನು ರಂಜಿಸಿದರು.