ಜನಪದ ನೈಜ, ಸತ್ಯ ಸಂಸ್ಕøತಿ

ಭಾಲ್ಕಿ:ಅ.28:ಇದ್ದದ್ದನ್ನು ಇದ್ದಂತೆ ಹೇಳಿದವರು ಜನಪದಕಾರರು. ಹಾಗಾಗಿ,
ಜನಪದ ನೈಜ, ಸತ್ಯ ಸಂಸ್ಕೃತಿ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಕೇಂದ್ರದ ಸಾಂಸ್ಕೃತಿಕ ಸಚಿವಾಲಯ, ಕರ್ನಾಟಕ ಜಾನಪದ ಪರಿಷತ್ ಬೀದರ್ ಜಿಲ್ಲಾ, ತಾಲ್ಲೂಕು ಘಟಕ ಭಾಲ್ಕಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ್, ಚನ್ನಬಸವ ಪಟ್ಟದೇವರ ಯುವಕ ಸಂಘ ಭಾಲ್ಕಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜನಪದ ಮೂಲ ಸಂಸ್ಕೃತಿ ಉಳಿದಾಗ ಮಾತ್ರ. ಗತಕಾಲದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ನಶಿಸುತ್ತಿರುವುದು ಕಳವಳಕಾರಿ ಸಂಗತಿ.ಜನಪದ ಕಲೆಗಳನ್ನು ಉಳಿಸಿ, ಬೆಳೆಸಲು ಜಗನ್ನಾಥ ಹೆಬ್ಬಾಳೆ, ರಾಜಕುಮಾರ ಹೆಬ್ಬಾಳೆ ಅವರು ಅವಿರೋಧವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಬೀದರ್ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ಮಾತನಾಡಿ,ಬಸವಲಿಂಗ ಪಟ್ಟದ್ದೇವರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಗೈದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ವರವಾಗಿ ಪರಿಣಮಿಸಿದೆ ಎಂದು ನುಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ
ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಎಲ್ಲವೂ ಅಡಗಿದೆ. ಜನಪದ ಸಾಹಿತ್ಯ, ವಚನ ಸಾಹಿತ್ಯದ ಭಾಷೆ ಎರಡೂ ಒಂದೇ. ವಚನಕಾರರು, ಜನಪದರು ಹೇಳಿರುವ ವಿಷಯಗಳಲ್ಲಿ ಸಾಮೀಪ್ಯವಿದೆ. ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.
ಜನಪದ ಸಾಹಿತ್ಯದಲ್ಲಿ ಪ್ರೀತಿ, ದಯೆ, ಪರಸ್ಪರ ಸಹಕಾರ ಸೇರಿದಂತೆ ಎಲ್ಲವೂ ಇದೆ. ಜನಪದ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಸಂವರ್ಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಸಂಯೋಜಕ ರಾಜಕುಮಾರ ಹೆಬ್ಬಾಳೆ ಮಾತನಾಡಿದರು.
ಮಹಾಲಿಂಗ ಸ್ವಾಮೀಜಿ,ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಸಂತರಾವ್ ಎಂ. ಹುಣಸನಾಳೆ, ಸಂಜುಕುಮಾರ ಜುಮ್ಮಾ,
ಪ್ರಮುಖರಾದ ಸಿದ್ರಾಮಪ್ಪ ಆಣದೂರೆ, ಶಿವು ಲೋಖಂಡೆ, ರೇಖಾಬಾಯಿ ರಾಜಶೇಖರ ಅಷ್ಟೂರೆ, ಶಂಭುಲಿಂಗ ಕಾಮಣ್ಣಾ, ರಾಜಕುಮಾರ ಜಲ್ದೆ, ಜೈರಾಜ ದಾಬಶೆಟ್ಟಿ ಶೋಭಾ ದೇಶಮುಖ, ಶಿವಾನಂದ ಗುಂದಗಿ, ಎಂ. ಬಂಡೆಪ್ಪ ಶರಣರು, ವೈಜಿನಾಥ ಕೊಡಗೆ, ಶಿವರಾಜ ಕೊಡಗೆ, ಶಕುಂತಲಾ ಪನಶೆಟ್ಟಿ, ಚಂದ್ರಕಾಂತ ಪಾಟೀಲ, ರಮೇಶ ಮಾನಶೆಟ್ಟೆ,
ಆಶಾಬಾಯಿ ರಾಠೋಡ,ಮನಿಷಾ ವಾಲೆ, ಸವಿತಾ ಭೂರೆ, ಮಲ್ಲಮ್ಮ ನಾಗನಕೇರೆ, ಯಲ್ಲನಗೌಡ, ಸೇರಿದಂತೆ ಇತರರು ಇದ್ದರು.

ಐದು ರಾಜ್ಯಗಳ ಕಲಾ ತಂಡಗಳು ಭಾಗಿ:
ಮಧ್ಯಪ್ರದೇಶದ ಕಲಾವಿದರು ಗಣಗೌರ ಜಾನಪದ ನೃತ್ಯ, ಛತ್ತಿಸಘಡದ ಗೌರಮಾಡಿಯ, ಆಂಧ್ರ ಪ್ರದೇಶದ ಫಪೇಟಗಲ್ಲು, ಮಹಾರಾಷ್ಟ್ರದ ಲಾವಣಿ ನೃತ್ಯ, ಕಲಖೋರಾ ತಾಂಡಾದ ಕಲಾವಿದರು ಲಂಬಾಣಿ ಜಾನಪದ ನೃತ್ಯ, ಭಾಗ್ಯವತಿ ಚಿಕಮಠ ಕಲಾ ತಂಡ ಗರ್ಭಾ ನೃತ್ಯ, ಮಹಾನಂದ ದೇಶಮುಖ ತಂಡ ಗೊರವರ ಕುಣಿತ, ಸರಸ್ವತಿ ಹುಲಸೂರೆ ತಂಡದವರು ಕೋಲಾಟ ನೃತ್ಯ
ಪ್ರಸ್ತುತ ಪಡಿಸಿ ಸಭಿಕರ ಮನ ತಣಿಸಿದರು.