ಜನಪದ ನಶಿಸಿದರೆ ದೇಶದ ಸಂಸ್ಕೃತಿ ನಶಿಸಿದಂತೆ

ಮುದ್ದೇಬಿಹಾಳ :ನ.೪:ಕನ್ನಡ ಜಾನಪದ ಪರಿಷತ್ತು ಬೆಂಗಳೂರು ಮುದ್ದೇಬಿಹಾಳ ತಾಲ್ಲೂಕು ಘಟಕ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಸಹಯೋಗದಲ್ಲಿ ವಿಕಾಸಕ್ಕಾಗಿ ಜಾನಪದ ಹಾಗೂ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಧುನಿಕ ಭರಾಟೆಯಲ್ಲಿ ಜನಪದ ನಮ್ಮ ಮೂಲ ತಾಯಿ ಬೇರಾದ ಜಾನಪದ ವನ್ನು ನಾವು ಮರೆಯುತ್ತಾ ಇದ್ದೇವೆ ಜನಪದ ಕಲೆಯನ್ನು ಉಳಿಸುವ ಮತ್ತು ಬೆಳೆಸುವುದು ನಮ್ಮ ನಿಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು .ಗ್ರಾಮೀಣ ಪ್ರದೇಶದಲ್ಲಿ ಅನೇಕ ಜಾನಪದ ಕಲಾ ಅವರನ್ನು ಗುರುತಿಸುವ ಕಾರ್ಯ ಕನ್ನಡ ಜಾನಪದ ಪರಿಷತ್ತು ಮಾಡುತ್ತಾ ಇದೆ ಎಂದು ಹೇಳಿದರು
ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ.ನಂತರ
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಜನಪದ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು
ನಂತರ ಮಾತನಾಡಿದ ಜಾನಪದ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳಾದ ಪುಂಡಲೀಕ ಮುರಾಳ ಮಾತನಾಡಿ ಜಿಲ್ಲೆಯಲ್ಲಿ ಈ ವರ್ಷ ನಮ್ಮ ಪರಿಷತ್ತಿನ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಸರ್ಕಾರವು ಜನಪದ ಕಲಾವಿದರಿಗೆ ೫೦೦೦ ಮಾಶಾಸನವನ್ನು ನೀಡಬೇಕು ವಿಜಯಪುರ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದಲ್ಲಿ ಬಬಲೇಶ್ವರ್ ದಲ್ಲಿ ಜಿಲ್ಲಾ ಕನ್ನಡ ಜನಪದ ಸಾಹಿತ್ಯ ಸಮ್ಮೇಳನ ವನ್ನು ಹಮ್ಮಿಕೊಂಡಿದೆ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊAಡರು
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಜನಪದ ಗೀತೆ. ಭಜನಾ ಪದ. ಸೋಬಾನೆ ಪದ.ಹಂತಿ ಹಾಡು. ಡೊಳ್ಳಿನ ಪದ. ಕಲಾಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ನಿಲಯದ ಪ್ರಾಂಶುಪಾಲರಾದ ಬಸವರಾಜ್ ಬಸವಂತಾಪೂರ. ಮುಖ್ಯ ಅತಿಥಿಗಳಾಗಿ ಎಮ್ ಡಿ ವಡಗೇರಿ ವಸತಿ ಪಾಲಕರು. ಎಂ ಎಂ ಚಲವಾದಿ ಶಿಕ್ಷಕರು. ಟಿ ಡಿ ಲಮಾಣಿ ಶಿಕ್ಷಕರು.ಮಾತನಾಡಿದರು.ಇದೇ ವೇಳೆ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಕನ್ನಡ ಜನಪದ ಪರಿಷತ್ತಿನ ಪದಾಧಿಕಾರಿಗಳನ್ನು ಶ್ರೀಮತಿ ಎಸ್ ಬಿ ಗೊಂಗಡಿ. ಮಡಿವಾಳಮ್ಮನಾಡಗೌಡ. ಕಾರ್ಯಕ್ರಮದ ಸ್ವಾಗತ ಶ್ರೀಮತಿ ಗಾಯತ್ರಿ ಬಡಿಗೇರ ಸಂಗೀತ ಶಿಕ್ಷಕಿ. ನಿರೂಪಣೆ ಯಲ್ಲವ್ವ ತಳವಾರ ಕನ್ನಡ ಶಿಕ್ಷಕಿ.ನಿರ್ವಹಿಸಿದರು ವಸತಿ ನಿಲಯದ ಗುರುವೃಂದ ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು