ಜನಪದ ನಮ್ಮ ಸಂಸ್ಕøತಿಯ ಒಂದು ಭಾಗ


ಶಿರಹಟ್ಟಿ, ಸೆ 3: ಜನಪದ ಕನ್ನಡ ನಾಡಿನ ಸಂಸ್ಕøತಿಯ ಒಂದು ಭಾಗವಾಗಿದ್ದು, ಇದು ಬದುಕಿನ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಜನರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಜನಪದದ ಎಲ್ಲಾ ವಿಚಾರಗಳು ಬದುಕಿನ ಎಲ್ಲ ವಿಚಾರಗಳಲ್ಲಿ ಹಾಸುಹೊಕ್ಕಾಗಿವೆ ಎಂದು ಬೆಳ್ಳಟ್ಟಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಕೊಟ್ರಯ್ಯ ಹೊಂಬಾಳಿಮಠ ಹೇಳಿದರು.
ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಜನಪದದ ಕೊಡುಗೆ ಕುರಿತು ಮಾತನಾಡಿದರು.
ಮನುಷ್ಯ ಜೀವನದ ಶುದ್ದೀಕರಣ ಮಾಡುವ ಶಕ್ತಿ ಜನಪದಕ್ಕಿದೆ. ಜನಪದ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಲು ಸಾದ್ಯವಾಗಿದೆ. ಜನಪದ ಸಾಹಿತ್ಯ ವಾಸ್ತವ ಬದುಕಿನ ಚಿತ್ರಣವನ್ನು ಬಿಚ್ಚಿಡುವ ಕೆಲಸ ಮಾಡಿದೆ. ಸಮಾಜದ ಒರೆ ಕೋರೆಗಳನ್ನು ತಿಳಿಸುವ ಮೂಲಕ ಜನತೆಯನ್ನು ಮಾನಸಿಕವಾಗಿ ಬಡಿದೆಬ್ಬಿಸುವ ಕಾರ್ಯಮಾಡುತ್ತಾ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ರಕಾಶ ಮಹಾಜನಶೆಟ್ಟರ, ಸಣ್ಣೀರಪ್ಪ ಹಳ್ಳೆಪ್ಪನವರ, ಆರ್.ಆರ್. ಗಡ್ಡದ್ದೇವರಮಠ, ಗಿರೀಶ ಕೊಡಬಾಳ, ಪ್ರಕಾಶ ಜೀರಂಕಳ್ಳಿ, ಮೋಹನ ಗುತ್ತೆಮನವರ, ಮಹೇಶ ಬಡ್ನಿ, ಕೊಟ್ರೇಶ ಸಜ್ಜನರ, ಎಸ್.ಎಫ್.ಮಠದ, ಎಮ್.ಬಿ.ಹಾವೇರಿ, É.ಡಿ.ಕುಲಕರ್ಣಿ,ಶಿವಯೋಗಿ ವಿಭೂತಿ, ಕೊಟ್ರೇಶ ಅಕ್ಕೂರ, ಬಿ.ವಿ.ಮುಳಗುಂದ, ಮುಂತಾದವರು ಉಪಸ್ಥಿತರಿದ್ದರು.