ಜನಪದ ತತ್ವಪದ ಉಳಿವಿಗೆ ಯುವ ಸಮೂಹ ಆಸಕ್ತಿ ತೋರಲಿ

ಕುಕನೂರು ಜ 08 :ರಾಷ್ಟ್ರಕ್ಕೆ ಹಿರಿಯರು ಬಿಟ್ಟು ಹೋದಂತಹ ಜನಪದ ತತ್ವಪದಗಳು ಉಳಿಯಬೇಕಾದರೆ ಯುವಸಮೂಹ ಅದರ ಕಡೆಗೆ ಆಸಕ್ತಿ ತೋರಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಹೇಳಿದರು
ಪಟ್ಟಣದ ಶ್ರೀ ಇಟಗಿ ಭೀಮಾಂಬಿಕಾ ದೇವಸ್ಥಾನದಲ್ಲಿ ಶ್ರೀ ಇಟಗಿ ಭೀಮಾಂಬಿಕಾ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟಜಾತಿ ವಿಶೇಷ ಘಟಕದಲ್ಲಿ ಪ್ರಾಯೋಜಿತ ಜನಪದ ಮತ್ತು ತತ್ವಪದ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,ಜನಪದ ತತ್ವಪದಗಳು ಜನಜಾಗೃತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಿದ್ದವು ,ಯುವಕರು ಆಧುನಿಕ ಜಗತ್ತಿನಲ್ಲಿ ಮೊಬೈಲ್ ಟಿವಿ ನೋಡುವುದರಲ್ಲಿ ಆಸಕ್ತಿ ತೋರುತ್ತ ನಾಟಕ ರಂಗಭೂಮಿ ಸಂಗೀತ ಸಾಂಸ್ಕೃತಿಕ ದೇಶದ ಆಚಾರ ವಿಚಾರಗಳ ಚಿಂತನ ಮಂಥನ ಮಾಡುವ ಅವಶ್ಯಕತೆ ಜರೂರು ಇದೆ ಎಂದರು ,
ಈ ಸಂದರ್ಭದಲ್ಲಿ ಮಾರೆಪ್ಪ ಚನ್ನದಾಸರ್ ವೆಂಕಟಪ್ಪ ಚನ್ನದಾಸರ ಹನುಮಂತ ಕುಮಾರ್ ಚನ್ನದಾಸರ್ ಪಿಚ್ಚಪ್ಪ ಚನ್ನದಾಸರ ಅವರಿಂದ ತತ್ವಪದ ಜನಪದ ಸಂಗೀತ ನಡೆಯಿತು
ಕಾರ್ಯಕ್ರಮದಲ್ಲಿ ಬಸವರಾಜ ಬಣ್ಣದಬಾವಿ ಆರ್ ಪಿ ರಾಜು ಲಕ್ಷ್ಮಣ್ಣ ಬೆದವಟ್ಟಿ ಶರಣಪ್ಪ ಕೊಪ್ಪದ್ ಶಿವಯ್ಯ ಬಸಪ್ಪ ಎಂ ಎಸ್ ಹಿರೇಮಠ ಎಸ್ ಎಂ ರಾಮಣ್ಣ ಮುತ್ತಾಳ ಮಹಾಂತೇಶ ಅಂಗಡಿ ಚನ್ನಬಸಪ್ಪ ಹಳ್ಳಿಕೇರಿ ಬಾಳಪ್ಪ ಮುರುಡಿ ಇತರರು ಉಪಸ್ಥಿತರಿದ್ದರು.