ಜನಪದ ಗೀತೆಗಳಿಂದ ಜಾಗೃತಿ

ಕೋಲಾರ, ಜು.೧೩: ಜನಪದ ಗೀತೆಗಳಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನ ಮಾನವನ್ನು ಕಲ್ಪಿಸಿದೆ. ತಂದೆ-ತಾಯಿ ಗುರು ಹಿರಿಯರಿಗೆ ಗೌರ ನೀಡಲು, ಜಾಗೃತಿ ಮೂಡಿಸಲು ಜನಪದ ಗೀತೆಗಳು ಇನ್ನೂ ನಮ್ಮೊಂದಿದೆ ಇದೆ ಎಂದು ಛತ್ರಕೋಡಿಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯಿನಿ ರೇಣುಕಾ ದೇವಿ ಅಭಿಪ್ರಾಯಪಟ್ಟರು.
ನಿರ್ಭಯ ಮಹಿಳಾ ಕ್ಷೇಮಾಭಿವೃದ್ಧಿ ಮಂಡಳಿ ಕೋಲಾರ ಇವರ ವತಿಯಿಂದ ಛತ್ರಕೋಡಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೆಣ್ಣನ್ನು ದೇವರುಗಳಿಗೆ ಹೋಲಿಕೆ ಮಾಡುತ್ತಾರೆ. ಹೆಣ್ಣನ್ನು ಪೂಜೆ ಮಾಡುವ ನಮ್ಮ ದೇಶದಲ್ಲಿ ಹೆಣ್ಣು ಒಂಟಿಯಾಗಿ ಹೋದರೆ ತಮ್ಮ ಮಕ್ಕಳಂತೆ, ಸೋದರಿ, ತಾಯಿಯಂತೆ ಕಾಣಬೇಕು. ಆದರೆ ಕೆಲವು ವಿಕೃತ ಮನಸ್ಸುಗಳಿಂದ ಹೆಣ್ಣಿನ ಮೇಲೆ ನಿರಂತರ ದಬ್ಬಾಳಿಕೆ, ಅತ್ಯಾಚರಗಳು ನಡೆಯುತ್ತಿರುವುದು ಮನುಷ್ಯ ಕುಲ ತಲೆತಗ್ಗಿಸುವಂತಹದ್ದು. ನಮ್ಮ ಜನಪದದ ಸಂಸ್ಕೃತಿ ನಮ್ಮಲ್ಲಿ ಉಳಿಯುವಂತೆ ಮಾಡಿದರೆ, ಅದರ ಅರ್ಥ ತಿಳಿದು ಬದುಕಿದರೆ ಸಮಾಜದಲ್ಲಿ ಸಮಾನತೆ ಕಾಣಲು ಸಾದ್ಯ ಎಂದರು.
ನಿರ್ಭಯ ಮಹಿಳಾ ಕ್ಷೇಮಾಭಿವೃದ್ಧಿ ಮಂಡಳಿ ಅಧ್ಯಕ್ಷೆ ನಿರ್ಭಯ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಮಾರುಹೋಗಿ ಅಶ್ಲೀಲ ವಾತಾವರಣ ಉಂಟಾಗುತ್ತಿದೆ. ಮೊಬೈಲ್ ವ್ಯಾಮೋಹ ಬಿಟ್ಟು ಪಠ್ಯ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಕಡೆ ಗಮನ ಹರಿಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಮಾಲ, ಸುಮ, ಶಾಂತಿ ಸೌಹಾರ್ದ ಕಲೆ ಮತ್ತು ಸಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಹೆಚ್.ಶಾಂತಮ್ಮ, ಶೈಲಜ, ತಬಲ ಕೃಷ್ಣಪ್ಪ, ಈನೆಲ ಈಜಲ ವೆಂಕಟಾಚಲಪತಿ, ಛತ್ರಕೋಡಿಹಳ್ಳಿ ಮೂಲ ಜನಪದ ಕಲಾವಿದರು.