ಜನಪದ ಕಲೆ ಉಳಿಸಿ ಬೆಳೆಸಿ:ರಾಜೀವ ಜಾನೆ

ಕಲಬುರಗಿ:ನ.17:ಆದರ್ಶ ಕಲಾ ಸಾಹಿತ್ಯ- ಸಾಂಸ್ಕøತಿಕ ಸಂಘದ ಅಡಿಯಲ್ಲಿ ದಿನಾಂಕ 15-11-2021ರಂದು ನಗರದ ಹನುಮಾನ್ ದೇವಸ್ಥಾನ ಅವರಣ ಶಕ್ತಿನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಜೀವ್ ಜಾನೆ ಅವರು ಮಾತನಾಡುತ್ತಾ ನಶಿಸಿ ಹೋಗುತ್ತಿರುವ ಜನಪದ ಕಲೆ ಉಳಿಸಿ ಬೆಳೆಸಬೇಕು ಅಲ್ಲದೆ ಸಣ್ಣಾಟ ದೊಡ್ಡಾಟ ಹಂತಿಪದ ಮೊಹರಂ ಪದಗಳು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್ಯಕ್ರಮಗಳು ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವುದರಿಂದ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡಲು ಸಾಧ್ಯವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾಜಿ ಮಹಾನಗರ ಪಾಲಿಕೆ ಮಹಾಪೌರರಾದ ಸೋಮಶೇಖರ್ ಮೇಲಿನಮನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ ಕಾಂಗ್ರೆಸ್ ಯುವ ಮುಖಂಡರಾದ ನಾಗರಾಜ್ ಕಾಂಬಳೆ, ಬಸವಣ್ಣಪ್ಪ ಕದ್ರಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರುಕ್ಮೇಶ್ ಭಂಡಾರಿ ವಹಿಸಿದ್ದರು,
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಗುರುಶಾಂತಯ್ಯ ಸ್ಥಾವರ ಮಠ ಕು. ಸ್ವಾತಿ ಬಿ ಕೋಬಾಳ್,ಶ್ರೀಮತಿ ಸುಮಂಗಲಾ ಕೋರಿ, ಅಮರೇಶ್ ಕೋರಿ, ಚೇತನ್ ಬಿ. ಶ್ರೀಮತಿ ಕಾಳಮ್ಮ ಮಠಪತಿ, ಕುಮಾರ ಆದರ್ಶ ಆರ್, ಬಂಡಾರಿ, ವೀರಭದ್ರಯ್ಯ ಸ್ಥಾವರಮಠ, ಸಂತೋಷ್ ಕೊಡ್ಲಿ ಇವರಿಂದ ಸುಗಮ ಸಂಗೀತ ವಚನ ಗಾಯನ, ತತ್ವಪದ, ಜಾನಪದ ಗೀತೆ ದಾಸವಾಣಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು ಬಡಾವಣೆಯ ನಾಗರಿಕರು ಹಿರಿಯರು ಹೆಣ್ಣುಮಕ್ಕಳು ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಸಂಘದ ಕಾರ್ಯದರ್ಶಿಯಾದ ಶರಣಮ್ಮ ಆರ್. ತಿಳಿಸಿದ್ದಾರೆ