ಜನಪದ ಕಲೆ ಈ ನಾಡಿನ ಸಂಪತ್ತು ಉಳಿಸಿ ಬೆಳೆಸಿ :ಜೆ. ಎಮ್. ಕೋರಬು

ಕಲಬುರಗಿ:ಆ.3: ಕನಕ ಮಹಾಂತ ಕಲಾಸಂಸ್ಥೆ ಗೊಬ್ಬುರ್ ವಾಡಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಫಜಲಪೂರ್ ತಾಲೂಕಿನ ರಂಗಮಂದಿರ ಅವರಣ ಗೊಬ್ಬರ( ಬಿ)ಯಲ್ಲಿ ಗಾನಸುಧೆ ಕಾರ್ಯಕ್ರಮ ಕೇಳುಗರ ಮನ ಸೆಳೆಯಿತು.
ಸಮಾಜಸೇವಕರಾದ ಜೆ.ಎಂ.ಕೋರಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ಕಲೆ ಈ ನಾಡಿನ ಸಂಪತ್ತು ಅದನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವದು ತುಂಬಾ ಶ್ಲಾಘನೀಯ , ಗ್ರಾಮೀಣ ಭಾಗದ ಕಲೆಗಳಾದ ಮೊಹರಮ ಪದಗಳು. ಗೀಗೀ ಪದಗಳು ಹಂತಿ ಪದಗಳು, ಸೋಬಾನ ಪದಗಳು ಮರೆಯಾಗುತ್ತಿದ್ದು ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದರು
ಮುಖ್ಯ ಅತಿಥಿಗಳಾಗಿ ಸಿದ್ದರಾಮ ಕೆ. ದೇವತ್ಕಲ್. ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್. ವಾಯ್.ಪಾಟೀಲ್ ಜಟ್ಟೆಪ್ಪ ಆರ್ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರು, ಜಭಿನಾ ಪ್ರಕೃದ್ದಿನ್ ಜಮಾದಾರ್, ಮೂಬಿನ್ ಎಮ್.ಪಟೇಲ್ ಸುರೇಶ್ ಕುಮಾರ್ ಐಮೂಲಿ, ರಾಕೇಶ್ ರಾಠೋಡ್ ಮಲ್ಲಿಕಾರ್ಜುನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಗಾನಸುಧೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಕೆಂಗನಾಳ ಗುರುಶಾಂತಯ್ಯ ಸ್ಥಾವರಮಠ, ಶಂಭುಲಿಂಗಯ್ಯ ಶಾಸ್ತ್ರಿಗಳು ಗೊಬ್ಬುರ್, ಪ್ರಶಾಂತ್ ಗೋಲ್ಡ್ಸ್ಮಿತ್ ಅಣ್ಣಾರಾವ್ ಶೇಳ್ಳಗಿ, ಸೈದಪ್ಪ ಸಪ್ಪನ್ ಗೋಳ್ ಶಿವಶರಣ ಸ್ವಾಮಿಗಳು ನಿಂಗದಳ್ಳಿ. ಪವಿತ್ರಾ ರಾಜನಾಳ. ಮಹಾಂತಯ್ಯ ಗಣಾಚಾರಿ. ತೋಟಯ್ಯ ಅಬ್ಬೆತುಮಕೂರು. ಚೇತನ್ ಬಿ ಕೋಬಾಳ. ರಾಜಕುಮಾರ್ ಮಾಡ್ಯಾಳ. ಸೂರ್ಯಕಾಂತ್ ಹೊಳೆ ಅವರಾದ. ವೀರಭದ್ರಯ್ಯ ಭೂಸನೂರ್.ನಾಗಲಿಂಗಯ್ಯ ಸುಂಟನೂರ.ಇವರಿಂದ ಗಾನಸುಧೆ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಮಹಮದ್ ಜಂಬಗಾ ಇವರಿಂದ ಮೊಹರಂ ಪದಗಳು. ಮಾಳಪ್ಪ ಗುಂದಗಿ ಗೊಬ್ಬುರ್ ಹಾಗೂ ತಂಡದವರಿಂದ ಡೊಳ್ಳಿನ ಪದ, ಚಂದ್ರಕಾಂತ್ ಡಿಗ್ಗಿ ತಂಡದಿಂದ ಖಣಿ ವಾದನ ಮೆರವಣಿಗೆಯಲ್ಲಿ ಭಾಗವಹಿಸಿದ್ದವು ಸಂಸ್ಥೆ ಅಧ್ಯಕ್ಷರಾದ ಸೂರ್ಯಕಾಂತ್ ಬಿ. ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಚಂದ್ರಕಾಂತ್ ಗುಳಗಿ ವಂದಿಸಿದರು.