ಜನಪದ ಕಲಾವಿದರು ಮಾಹಿತಿ ಸಲ್ಲಿಸಲಿಃ ಬಾಳನಗೌಡ ಪಾಟೀಲ

ವಿಜಯಪುರ, ಜು.12-ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ವತಿಯಿಂದ ವಿವಿಧ ಕಲಾವಿದರ ಮತ್ತು ಸಾಹಿತಿಗಳ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದು, ಸೇವಾಸಿಂಧು ಮೂಲಕ ಮಾಹಿತಿ ಸಲ್ಲಿಸಲು ಕೇಳಿಕೊಂಡಿದೆ.
ಆದ ಕಾರಣ ಸರಕಾರ ಇನ್ನು ಮುಂದೆ ಕಲಾವಿದರಿಗೆ ಮಾಶಾಸನ, ಪ್ರಶಸ್ತಿ, ಸನ್ಮಾನ, ಅನುದಾನ ಮತ್ತು ಪ್ರಾಯೋಜಿತ ಕಾರ್ಯಕ್ರಮ ನೀಡಲು ತಂತ್ರಜ್ಞಾನ ಮಾಹಿತಿಯನ್ನು ಅವಲಂಬಿಸಲಿದೆ. ಆದ್ದರಿಂದ ಜಿಲ್ಲೆಯ ಸಮಸ್ತ ಜನಪದ ಕಲಾವಿದರು ಕಡ್ಡಾಯವಾಗಿ ಕಂಪ್ಯೂಟರ್ (ಸೇವಾಸಿಂಧು) ಮೂಲಕ ತಮ್ಮ ಆಧಾರ ಪತ್ರ, ಪಡಿತರ ಪತ್ರ, ಮತದಾರ ಪತ್ರ, ಕಲಾಪ್ರದರ್ಶನ ಪ್ರಮಾಣಪತ್ರ, ಪ್ರಶಸ್ತಿಪತ್ರ, ಸನ್ಮಾನಪತ್ರ, ಗಣ್ಯರ ಪತ್ರ ಮತ್ತು ಕಲಾಪ್ರದರ್ಶನ ಭಾವಚಿತ್ರಗಳೊಂದಿಗೆ ಜುಲೈ 15 ರೊಳಗಾಗಿ ಮಾಹಿತಿ ಸಲ್ಲಿಸಿ ಸರಕಾರದ ಸಹಾಯ ಪಡೆಯಲು ಅವಕಾಶ ಮಾಡಿಕೊಳ್ಳಬೇಕೆಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಜನಪದ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.