ಜನಪದ ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ:ಎತ್ತಿನಮನಿ

ಶಹಾಪೂರ:ಜ.17:ಸುರಪುರ ತಾಲೂಕಿನ ಬಾದ್ಯಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಸಂಸ್ಕøತಿಕ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಕ್ಷರದಲ್ಲಿ ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ ಹಳ್ಳಿ ಪ್ರದೇಶಗಳಲ್ಲಿ ನಮ್ಮ ದೇಶದ ಪರಂಪರೆಯಂತೆ ಡೊಳ್ಳು ಕುಣಿತ ಬಯಲಾಟ ಕಣೆಯಲೆಗೆ ಭಜನೆ ಅಂತಿ ಪದ ಹಲವು ರೀತಿಯ ಜನಪದ ಕಲೆ ಇದ್ದು ಜನಪದ ಕಲಾವಿದರು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಓದದೆ ಬಾಯಿಂದ ಬಾಯಿಗೆ ಕಲಿತು ನಮ್ಮ ದೇಶದ ಹಿರಿಮೆ ಗಿರಿಮೆಯನ್ನು ಹೆಚ್ಚು ಮಾಡಿದ್ದಾರೆ ಹಲವಾರು ಸಂಸ್ತೆ ಕಾರ್ಯಕ್ರಮಗಳು ಕಲಾವಿದರಿಂದ ಪ್ರದರ್ಶಿಸಲಾಯಿತು ಸಿದ್ದನಗೌಡ ಹೆಬ್ಬಾಳ ಮಾತನಾಡಿ ಜನಪದ ಕಲೆ ನಮ್ಮ ನಾಡನ್ನು ನಮ್ಮ ಪ್ರದೇಶವನ್ನು ಪ್ರತಿನಿಧಿಸುವ ಕಲೆಯಾಗಿದೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಜನಪದ ಕಲೆಗಳು ತನ್ನದೇ ಆದ ಹಿರಿಮೆ, ಗರಿಮೆಯನ್ನು ಹೊಂದಿವೆ ಇದೇ ರೀತಿ ನಮ್ಮ ಭಾಗದಲ್ಲಿ ಕೂಡ ಹಲವಾರು ಕಲೆಗಳಿವೆ ಎಂದು ನುಡಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶ ಅಂಗಡಿ ಕನ್ನಡ ಉದ್ಘಾಟಿಸಿದರು ಕೃಷ್ಣಪ್ಪ ಕುಂಬಾರಪೇಟೆ ಭೀಮಣ್ಣ ಕೊಡಮ್ಮನಹಳ್ಳಿ ಶಿಕುಂಡಪ್ಪ ಜಾಲಹಳ್ಳಿ ಕೆಂಪಣ್ಣ ಚನ್ನುರ್ ಹನುಮಂತ ರಾಯ ಗೌಡ ಮತ್ತಿತರರು ಇದ್ದರು ಭಜನೆ ಅಂತಿ ಪದ ಕೋಲಾಟ ಮುಂತಾದ ಕಲೆಗಳನ್ನು ಪ್ರದರ್ಶಿಸಿದರು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದಾಪೂರ್ ಪ್ರಸ್ಥಭೂತ ಮಾತನಾಡಿದರು