ಜನಪದರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟ ಕವಿರಾಜಮಾರ್ಗ

ಕಲಬುರಗಿ,ಮಾ.17:ಕವಿರಾಜ ಮಾರ್ಗ ಕೃತಿ ಸಂಸ್ಕøತಿಕ ಕಾವ್ಯ,ಲಾಕ್ಷಣಿಕ ಗ್ರಂಥವಾಗಿದೆ. ಕನ್ನಡ ಸಾಹಿತ್ಯದ ಮೊಟ್ಟಮೊದಲ ಕೃತಿಯಾಗಿ ಹೊರ ಹೊಮ್ಮಿ. ಕನ್ನಡ ನಾಡು, ನುಡಿ, ಪ್ರದೇಶ ಜನರ ಬಗ್ಗೆ ಮತ್ತು ಪರಿಸರದ ಕುರಿತು ತಿಳಿಸಕೊಡುತ್ತದೆ. ಹಾಗೇ ಕಾವ್ಯ ದೋಷ ವ್ಯಾಕರಣ ನಾಡುನುಡಿ ಗಾದೆಗಳನ್ನು ಈ ಕೃತಿಯಲ್ಲಿ ನೋಡಬಹುದಾಗಿದೆ. ಕೃತಿಯೂ ಪಂಡಿತರಿಗಿಂತ ಜನಪದರಿಗೆ ಹೆಚ್ಚಿನ ಪ್ರಾಶಸ್ತ್ಯತೆ ಕೊಟ್ಟಿದೆ. ಕವಿಗಳಿಗೆ ಮತ್ತು ರಾಜರಿಗೆ ಮಾರ್ಗವನ್ನು ತೋರಿಸುವ ಕೆಲಸ ಮಾಡಿದೆ ಎಂದು ಡಾ. ಟಿ.ಡಿ. ರಾಜಣ್ಣ ನುಡಿದರು.ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಕವಿರಾಜ ಮಾರ್ಗ ಸಮಾಜೋ ಸಂಸ್ಕøತಿಕ ಅನನ್ಯತೆ ಎಂಬ ವಿಷಯ ಕುರಿತು ಮಾತನಾಡಿದರು. ಕನ್ನಡ ನಾಡಿನ ಗಡಿ ಜನರ ಸ್ವಭಾವವನ್ನು ತಿಳಿಸಿಕೊಡುತ್ತದೆ.ಇಡಿ ಕೃತಿಯನ್ನು ನೋಡಿದಾಗ ಕನ್ನಡ ಸಾಹಿತ್ಯ ಎಷ್ಟು ಸಮೃದ್ಧವಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಕನ್ನಡದ ಕೈಪಿಡಿಯಾಗಿದೆ ಎಂದು ಹೇಳಿದರು.
ಇನ್ನೊಬ್ಬ ವಿಶೇಷ ಉಪನ್ಯಾಸಕ ಡಾ. ಗವಿಸಿದ್ಧಪ್ಪ ಪಾಟೀಲ ಅವರು ಸಿದ್ಧಯ್ಯ ಪುರಾಣಿಕ ಅವರ ಸಾಹಿತ್ಯ ಕುರಿತು ಮಾತನಾಡಿ ಉನ್ನತ ಅಧಿಕಾರಿಯಾಗಿದ್ದುಕೊಂಡು ಸಾಹಿತ್ಯಿಕವಾಗಿ ತೊಡಗಿಕೊಂಡ ಅಪರೂಪದ ವ್ಯಕ್ತಿ. ಕೊಪ್ಪಳ ಭಾಗದ ಸಾಂಸ್ಕøತಿಕ ಪರಿಸರ ಇವರಿಗೆ ಪ್ರೇರಣೆ ನೀಡಿದವು. ಶಿಸ್ತುಬದ್ಧ ಕ್ರಿಯಾಶೀಲ ವ್ಯಕ್ತಿತ್ವ ಇವರದಾಗಿತ್ತು. ಸಂಘಟನಾತ್ಮಕ ಮನೋಭಾವ ವೈಚಾರಿಕ ಚಿಂತನೆ ಜೀವಪರ ನಿಲುವುಗಳ ಬಗ್ಗೆ ಕಳಕಳಿ ವ್ಯಕ್ತ ಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಮೇಶ ರಾಠೋಡ ವಹಿಸಿದ್ದರು.
ಕಾರ್ಯಕ್ರಮನಿರ್ವಹಣೆಯನ್ನು ಡಾ. ಸುಲಾಬಾಯಿ ಎಚ್, ಸ್ವಾಗತವನ್ನು ಡಾ. ಪ್ರಕಾಶ ಸಂಗಮ, ವಂದನಾರ್ಪಣೆ ಡಾ. ಶಿವಗಂಗಾ ಬಿಲಗುಂದಿ ಮಾಡಿದರು.