ಜನಪದರಿಂದ ದೇಶದ ಸಂಸ್ಕøತಿ, ಪರಂಪರೆ ಜೀವಂತಿಕೆ ಸಾಧ್ಯ

ಕಲಬುರಗಿ:ಆ.22: ನಮ್ಮ ದೇಶದ ರೈತಾಪಿ ವರ್ಗ, ಜನಸಾಮಾನ್ಯರಿಂದ ಹುಟ್ಟಿಕೊಂಡಿರುವ ಜಾನಪದ ಕಲೆ, ಪರಂಪರೆ, ಸಂಸ್ಕøತಿ ಜಾತಿ, ಧರ್ಮ ಮೀರಿರುವುದು. ಜಾನಪದ ಸಂಸ್ಕøತಿಯಲ್ಲಿ ನಮ್ಮತನ, ಗುರು-ಹಿರಿಯರಿಗೆ ಗೌರವಿಸುವ, ಮಾನವೀಯ ಮೌಲ್ಯಗಳಿವೆ. ಇದು ವ್ಯಕ್ತಿಯಲ್ಲಿ ಮಾನವೀಯತೆಯನ್ನು ಬೆಳೆÉಸುತ್ತದೆ. ಬಹಳ ವರ್ಷಗಳಿಂದ ಈ ಪದ್ದತಿ ಜೀವಂತಿಕೆ ಉಳಿದಿದೆ ಎಂದರೆ ಅದು ಜಾನಪದ ಕಲಾವಿದರಿಂದ ಮಾತ್ರ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ.ವಾಸುದೇವ ಸೇಡಂ ಅಭಿಮತಪಟ್ಟರು.

   ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ 'ಜೈಭೀಮ ಕೋಲಾಟ ಸಂಘ' ಮತ್ತು 'ಕರಿಬಸವೇಶ್ವರ ಕೋಲಾಟ ಸಂಘ'ದ ವತಿಯಿಂದ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸೋಮವಾರ ಮಕ್ಕಳಿಂದ ಜರುಗಿದ ಕೋಲಾಟ, ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
  ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಜಾನಪದ ಪರಂಪರೆ ನಮ್ಮ ದೇಶದ ಮಣ್ಣಿನ ಪದ್ದತಿಯಾಗಿದ್ದು, ವಿದೇಶಿ ಸಂಸ್ಕøತಿ ಅನುಕರಣೆಯ ಭರಾಟೆಯಲ್ಲಿ ನಮ್ಮ ದೇಶದ ಮೂಲ ಸಂಸ್ಕøತಿಯನ್ನು ಮರೆಯುವುದು ಬೇಡ. ಎಲ್ಲರನ್ನು ಒಗ್ಗೂಡಿಸುವ ಕೆಲಸ ಜಾನಪದ ಸಂಸ್ಕøತಿ ಹೊಂದಿದೆÉ. ಇದನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕೆಲಸ ಮಾಡಬೇಕಾಗಿದೆ. ಜಾನಪದ ಕಲೆ, ಸಂಸ್ಕøತಿ, ಕಲಾವಿದರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
 ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ಹಣಮಂತ ಶೇರಿ, ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ತಾಲೂಕಾಧ್ಯಕ್ಷ ಅಪ್ಪಾಸಾಬ್ ತೀರ್ಥೆ, ವಲಯ ಅಧ್ಯಕ್ಷ ರಾಜಶೇಖರ ಹರಿಹರ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಕಂದಗೂಳೆ, ಪ್ರಮುಖರಾದ ಶಿವಾನಂದ ಘಂಟಿ, ವೈಜನಾಥ ತಡಕಲ, ಅಪ್ಪುಸಾ ಮೈಸಲಗಿ, ಕೋಲಾಟ ತಂಡದ ಅಧ್ಯಕ್ಷ ವಿಠಲ ಕೇರನಾಯಕ, ಉಪಾಧ್ಯಕ್ಷ ಹಣಮಂತ ಕೇರನಾಯಕ, ಕಾರ್ಯದರ್ಶಿ ಶಿವಪುತ್ರ ಭದ್ರೆ, ಉಪ ಕಾರ್ಯದರ್ಶಿ ಶಿವಪುತ್ರ ಬಮನಾಯಕ, ಖಜಾಂಚಿ ವಿಕಾಸ ಭದ್ರೆ, ಸದಸ್ಯ ಅಶ್ವಥ ಕೇರನಾಯಕ, ಕಲಾವಿದರಾದ ಗುರುಬಸಪ್ಪ ನಡಗೇರಿ, ಮ್ಲಲಿಕಾರ್ಜುನ ಧನಗರ, ಶೈಲೇಂದ್ರ ಕೇರನಾಯಕ, ರಾಮಪ್ಪ ಭದ್ರೆ, ಪ್ರಲ್ಹಾದ ವಾಲಿಕಾರ, ವೆಂಕಟೇಶ ಭದ್ರೆ, ಬಸವರಾಜ ಅಲ್ದಿ, ಕಾಶಿನಾಥ ಹೆಬಳಿ, ಗುರಪ್ಪ ವಾಡೆ ಹಾಗೂ ಗ್ರಾಮದ ಅನೇಕರು ಭಾಗವಹಿಸಿದ್ದರು.