ಜನಪದದಿಂದ ಸಂಸ್ಕಾರ, ಸಂಸ್ಕøತಿಗಳ ಜೀವಂತಿಕೆ: ವಣಿಕ್ಯಾಳ್

ಕೆಂಭಾವಿ:ನ.22:ಜನರ ಧ್ವನಿಯಾಗಿ ಹೊರಹೊಮ್ಮಿದ ಜನಪದ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನಮನ ಗೆದ್ದ ನಾಡಿನ ಖ್ಯಾತ ಜನಪದ ಕೋಗಿಲೆ ಗುರುರಾಜ ಹೊಸಕೋಟೆಯವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಜಿಪಂ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಜೈ ಭಾರತಾಂಬೆ ಟ್ರಸ್ಟ್ ಸಹಯೋಗದಲ್ಲಿ ರವಿವಾರ ಜರುಗಿದ ಜಾನಪದ ಸಂಭ್ರಮ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಹಾಗೂ ಕರ್ನಾಟಕ ರತ್ನ ಡಾ. ಪುನಿತ್ ರಾಜಕುಮಾರ್ ರವರಿಗೆ ದೀಪ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಗರನಾಡು ಜನಪದರ ತವರು, ಸಂಸ್ಕಾರ ಸಂಸ್ಕೃತಿಗಳ ಜೀವಂತಿಗೆ ಜನಪದ ಕೊಡುಗೆ ಅಪಾರವಾದದ್ದು. ಇಂದಿನ ದಿನಮಾನದಲ್ಲಿ ಜನಪದ ಸಾಹಿತ್ಯ ಯುವ ಪೀಳಿಗೆ ಮರೆತಿದೆ. ಹೊಸಕೋಟೆಯವರ ಇಡೀ ಕುಟುಂಬ ಸಮರ್ಪಣಾ ಭಾವದಿಂದ ಜನಪದ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ಅವರ ಮಾರ್ಗದರ್ಶನದಲ್ಲಿ ಈ ಭಾಗದ ಹಲವು ಯುವ ಕಲಾವಿದರು ದಿಟ್ಟ ಹೆಜ್ಜೆಯನ್ನಿಟ್ಟು ಜಾನಪದ ಪೆÇೀಷಣೆಗೆ ಮುಂದಾಗುತ್ತಿರುವುದು ಅಭಿನಂದನೀಯ ಎಂದರು.
ಸಾನಿಧ್ಯವಹಿಸಿದ ಕೆಂಭಾವಿ ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಹಾಗೂ ಕಡಕಲ್ಲ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರ ಮುನಿ ಮಹಾಸ್ವಾಮಿಜೀಗಳು ಮಾತನಾಡಿ ಕೆಂಭಾವಿಯ ಯುವ ಕಲಾವಿದರಾದ ಲೇಮನ್ ಪರಶುರಾಮ ಹಾಗೂ ರಾಕ್ಸ ಮನು ಸಹೋದರರು ಭಾರತಾಂಬೆ ಟ್ರಸ್ಟ್ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಶ್ರಮವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಗೀತಗಾಯನ, ಸರಿಗಮ ಖ್ಯಾತಿಯ ಸೂರ್ಯಕಾಂತ ಹಾಗೂ ಶಟ್ಟೆಪ್ಪ ಗದಗ ಇವರಿಂದ ಚಲನಚಿತ್ರ ಗೀತೆಗಳು ಮೂಡಿಬಂದವು.
ಲಿಂಗನಗೌಡ ಮಾ ಪಾಟೀಲ್, ಶ್ರೀನಿವಾಸ ಪಾಟೀಲ್ ಯಾಳಗಿ, ತೋಟಪ್ಪ ಪೂಜಾರಿ, ಬಾಬುಗೌಡ ಪಾಟೀಲ್, ಪ್ರಕಾಶ ಅಂಗಡಿ, ಚಂದ್ರಶೇಖರ ವಜ್ಜಲ್, ಶರಣಬಸವ ಮುದೋಳ, ರಂಗನಗಢ ಪಾಟೀಲ್ ಮಲ್ಲು ದಂಡಿನ್, ರಂಗನಗೌಡ ಪಾಟೀಲ್, ರವೀಶಂಕರ ಸೊನ್ನದ್, ಬಸವರಾಜ್ ಅಂಗಡಿ, ಶಿವಯೋಗಿ ಕುಂಬಾರ್, ಅಯ್ಯಣ್ಣ ವೇದಿಕೆ ಮೇಲಿದ್ದರು.
ಶಿಕ್ಷಕ ಸಿದ್ದಣ್ಣ ಧನಗೊಂಡ ನಿರೂಪಿಸಿದರು, ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು, ಸಾಯಬಣ್ಣ ಎಂಟಮನ ವಂದಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ. ಲೆಮನ್ ಪರಶುರಾಮ ರವರ ಗುರುವಿನ ಗುರಿ ಸಾಕ್ಷಾ ಚಿತ್ರ ಟೀಜರ್ ಅನಾವರಣ,
ಜೀವನ ತಂಡದಿಂದ ಕನ್ನಡ ಗೀತೆಗೆ ನೃತ್ಯ ಹಾಗೂ ಕಲಾವಿದ ಹಳ್ಳೆರಾವ್ ಕುಲಕರ್ಣಿರವರ ಕುಂಚ ಗಾಯನ ಹಾಗೂ ಕನ್ನಡ ರತ್ನ ಡಾ. ಪುನೀತ್ ರಾಜ್ ರವರಿಗೆ ಪ್ರೇಕ್ಷರಿಂದ ದೀಪ ನಮನ ಮೂಡಿಬಂದಿತು