ಜನತೆ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸದ ಪ್ರತಿಕ :ಸಿಎಂ

ಬೆಂಗಳೂರು ನ.10-ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ. ಜನತೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂಬುದಕ್ಕೆ ಫಲಿತಾಂಶ ಸಾಕ್ಷಿ. ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ
ಉಪಚುನಾವಣೆ ಫಲಿತಾಂಶ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಜನರಿಗೆ ಪಕ್ಷ ನೀಡಿರುವ
ಭರವಸೆಯನ್ನು ಖಂಡಿತ ನೆರವೇರಿಸುತ್ತೇನೆ.ಎಂದರು

ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆಗೆ ನಾವು ಸಿದ್ದತೆ ಆರಂಭಿಸಿದ್ದೇವೆ. ವಿಜಯೇಂದ್ರ ಉಪಚುನಾವಣೆ ಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ವರಿಷ್ಟರು ಸೂಚಿಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬಹದು ಎಂದರು
ರಾಜ್ಯ ಸಚಿವ ಸಂಪುಟವನ್ನು ಒಂದೆರಡು ಮೂರು ದಿನಗಳಲ್ಲಿ ವಿಸ್ತರಣೆ ಮಾಡಲಾಗುವುದು. ಕೆಲವರನ್ನು ಸಂಪುಟದಿಂದ ಬಿಡಬೇಕಾಗುತ್ತದೆ, ಕೆಲವರನ್ನು ಸೇರಿಸಿಕೊಳ್ಳಬೇಕಿದೆ. ಈ ಬಗ್ಗೆ ನಾಳೆ ಪ್ರಧಾನಿ ಮೋದಿ ಹಾಗೂ ನಡ್ಡಾ ಜತೆ ಮಾತುಕತೆ ಮಾಡುತ್ತೇನೆ..ಎಂದರು
ಸರ್ಕಾರ ಹಾಗೂ ತಮ್ಮ ವಿರುದ್ದ ಅನಗತ್ಯ ಆರೋಪ ಮಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮತದಾರರೇ ಉತ್ತರ ನೀಡಿದ್ದಾರೆ. ಇನ್ನು ಮುಂದಾದರೂ ಅವರು ಜವಾಬ್ದಾರಿ ಯುತವಾಗಿ ನಡೆದುಕೊಳ್ಳಲಿ ಎಂದಷ್ಟೇ ಸಲಹೆ ನೀಡುತ್ತೇನೆ..ಎಂದರು