ಜನತೆ ಕೈಬಿಟ್ಟರೂ ಸೋನಿಯಾ ಕೈಬಿಡಲಿಲ್ಲ: ಖರ್ಗೆ

ಕಲಬುರಗಿ, ಮೇ.5- “ಕಲಬುರಗಿಯ ಜನತೆ ಕೈ ಬಿಟ್ರು ಕೂಡ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನನ್ನನ್ನು ಕೈ ಬಿಟ್ಟಿಲ್ಲ. ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡ ಖರ್ಗೆ ಅವರು ಸೋಲಿನ ಕಹಿ ಇನ್ನೂ ಮರೆತಿಲ್ಲ ಎನ್ನುವುದಕ್ಕೆ ಅವರು ಆಡಿದ ಮಾತೇ ಸಾಕ್ಷಿ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತವರು ಜಿಲ್ಲೆ ಕಲಬುರಗಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ ಮತನಾಡಿದ ಅವರು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕಾರ್ಮಿಕ, ರೈಲ್ವೇ ಸೇರಿದಂತೆ ಪ್ರಮುಖ ಖಾತೆಗಳನ್ನು ಕೊಟ್ಟಿದ್ದರು ಎಂದು ಹೇಳಿದ್ದಾರೆ.

ಅದೇರೀತಿ ನನ್ನನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ರು ತದನಂತರ ರಾಜ್ಯಸಭೆಗೆ ಕಳುಹಿಸಿ ಅಲ್ಲಿಯೂ ಕೂಡ ವಿರೋಧ ಪಕ್ಷದ ನಾಯಕರಾಗಿ ಮಾಡಿದ್ದಾರೆ.ಇಂದು ನಿಮ್ಮೆಲ್ಲರ ಆಶೀವಾರ್ದದಿಂದ ಇಂದು ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಈ ಸ್ಥಾನದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ಎಐಸಿಸಿ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಕ್ಕಿಲ್ಲ. ಈ ಸ್ಥಾನದಲ್ಲಿ ಗಾಂಧೀ, ನೆಹರೂ, ಪಟೇಲ್ ಹಾಗೂ ಮೌಲಾನ ಆಝಾಧ್ ಈ ಸ್ಥಾನವನ್ನು ಅಲಂಕರಿಸಿದ್ದರು. ಆ ಸ್ಥಾನ ಇಂದು ಕಲಬುರಗಿ ಜನತೆಯ ಆಶೀವಾರ್ದದಿಂದ ಇಂದು ಈ ಸ್ಥಾನದಲ್ಲಿ ಇದ್ದೇನೆ. ಈ ಭಾರಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಕೆಲ ಜನ ಅಪ್ರಪಚಾರ ಮಾಡುತ್ತಾ ಇದ್ದಾರೆ. ನನ್ನನ್ನು ಸೋಲಿಸಿದರೂ ಪರವಾಗಿಲ್ಲ, ಎಂ.ವೈ ಪಾಟೀಲರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಒಂದು ವೇಳೆ ಅವರನ್ನು ಸೋಲಿಸಿದ್ದಲ್ಲಿ ನನಗೂ ಮತ್ತು ನನ್ನ ಪಕ್ಷಕ್ಕೂ ಅವಮಾನ. ಇದು ನನ್ನ ಪಕ್ಷದ ಪ್ರಶ್ನೆ. ನನ್ನ ಹೆಸರಿನ ಮೇಲೆ ರಾಜಕೀಯ ಮಾಡಕ್ಕೆ ಹೋಗಬೇಡಿ. ನೂರಕ್ಕೂ ನೂರು ಎಂ.ವೈ ಪಾಟೀಲರನ್ನು ಗೆಲ್ಲಸಿ ಎಂದು ಜನತೆಗೆ ಪದೇ ಪದೇ ಖರ್ಗೆ ಅವರು ಮಾತನಾಡಿಸಿದರು.