ಜನತೆಯ ಸಂರಕ್ಷಣೆಗೆ ಕಲಬುರಗಿಗೆ ಬಂದಿದೆ ಸೇನಾ ಪಡೆ

ಕಲಬುರಗಿ.ಅ.17:ಭೀಮಾ ಪ್ರವಾಹದಿಂದ ಸಂಕಷ್ಟದಲ್ಲಿರುವ ಕಲಬುರಗಿ ಜಿಲ್ಲೆಯ ಜನತೆಯ ಸಂರಕ್ಷಣೆಗೆ ಸಿಕಿಂದ್ರಾಬಾದ್ನಿಂದ ಸೇನಾ ಪಡೆ ಬಂದಿದೆ.

ಮೇಜರ್ ಮಾರ್ಟಿನ್ ಅರವಿಂದ ಅವರ ನೇತೃತ್ಬದ ಕಂಪನಿಯಲ್ಲಿ ಒಟ್ಟು 98 ಜನ ಯೋಧರಿದ್ದಾರೆ

ಸೇನಾ ಮೂರು ತಂಡವಾಗಿ ಅಫಜಲಪೂರ, ಜೇವರ್ಗಿ ಹಾಗೂ ಶಹಾಬಾದ ತಾಲೂಕಿನಲ್ಲಿ ಜನರ ರಕ್ಷಣಾ ಕಾರ್ಯಾಚರಣೆಗೆ ಇಳಿಯಲಿದೆ.

ಇಂದು ರಾತ್ರಿಯೆ ಸೇನಾ ಪಡೆ ರಕ್ಷಣಾ‌ ಕಾರ್ಯಕ್ಕೆ ಧುಮುಕಲಿದೆ

ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇನಾ ತುಕಡಿಯನ್ನು ಜಿಲ್ಲಾಡಳಿತ ಪರವಾಗಿ ಬರಮಾಡಿಕೊಂಡರು