ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುವೆ

ಹನೂರು:ಜ.09: ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಿಂತೆ ನಾನು ಪರಾಜಿತನಾದರೂ ಕೂಡ ಕ್ಷೇತ್ರದ ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರೊಡನೆ ಪೂಜೆ ಸಲ್ಲಿಸಿ ಸುದ್ದಿಗಾರರೊಡನೆ ಮಾತನಾಡಿದರು.
ಜನತೆ ಕಡಿಮೆ ಅವಧಿಯಲ್ಲಿ ನನ್ನ ಬಗ್ಗೆ ಒಲವನ್ನು ತೋರಿ 44 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಆರ್ಶಿವದಿಸಿದ್ದಾರೆ ಅವರ ಸೇವೆಯನ್ನು ನನ್ನಕೈಲಾದಷ್ಟು ಮಾಡುವುದು ನನ್ನ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಮುಳ್ಳೂರು ಶಿವಮಲ್ಲು, ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮಂಜೇಶ್, ಪರಿಸರ ಪ್ರೇಮಿ ಕೃಷ್ಣಮೂರ್ತಿ, ಸಿದ್ದರಾಜು ಲೊಕ್ಕನಹಳ್ಳಿ ಜೆಡಿಎಸ್ ಮುಖಂಡರುಗಳು ಹಾಗೂ ಗ್ರಾಮಸ್ಥರು ಇದ್ದರು.