ಜನತೆಗೆ ಸುಳ್ಳು ಆಶ್ವಾಸನೆ ನೀಡುವ ಕೆಲಸ

ಹುಮನಾಬಾದ್:ಮಾ.11: ಕ್ಷೇತ್ರದ ಜನತೆಗೆ ಸುಳ್ಳು ಆಶ್ವಾಸನೆ ನೀಡುವ ಮೂಲಕ ಮತದಾರರಿಂದ ಮತ ಸೆಳೆಯುವ ಕಾರ್ಯವನ್ನು ಕಾಂಗ್ರೆಸ್ ನಾಯ ಕರು ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಸಿದ್ದು ಪಾಟೀಲ್ ಆರುಪಿಸಿದರು

ಪಟ್ಟಣದ ಬಿಜೆಪಿ ಮಂಡಲ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 2. ಅವರು, ಸ್ಥಳೀಯ ಶಾಸಕರು ಕ್ಷೇತ್ರದ ಜನತೆಯ ಭರವಸೆ ಕಳೆದುಕೊಂಡಿದ್ದಾರೆ. ”ಈ ಈ ಚುನಾವಣೆಯ ಸೋಲು ಎದುರಿಸಲು ಸಾಧ್ಯವಾಗದ ಕಾರಣ ಕುಕ್ಕರ್ ವಿತರಿಸುವ ಮೂಲಕ ಮತದಾರರ ಮತ ಸೆಳೆಯುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ” ಎಂದು ದೂರಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಕುಕ್ಕರ್ ನೀಡುವ ಕುರಿತು ಪ್ರಚಾರ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿ ದ್ದಾರೆ.ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಸ್ವತಃ ಶಾಸಕರೇ ಹೇಳುತ್ತಿದ್ದಾರೆ.ಇಬ್ಬರಿಗೆ ಗಾಯ ವಾಗಿದೆ.ಹೀಗಾಗಿ ಇದೀಗ ಕುಕ್ಕರ್ ವಿತರಣೆ ಮಾಡುವುದಿಲ್ಲ. ಕಾರ್ಯಕರ್ತ ರಿಂದ ನಿಮ್ಮ
ಮನೆ ಬಾಗಿಲಿಗೆ ಕುಕ್ಕರ್ ಕಳುಹಿಸುತ್ತೇವೆ. ಕುಕ್ಕರ್ ನೀಡುವ ಕುರಿತು ಪ್ರಚಾರ ಮಾಡಿಲ್ಲ ಎಂದಾದ ಮೇಲೆ ಕುಕ್ಕರ್ ನೀಡುವ ಮಾತು ಶಾಸಕರ ಬಾಯಿಯಲ್ಲಿ ಬಂದಿದ್ದು ಏಕೆ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳ ಮಾತನಾಡಿ, ಮಹಿಳಾ ದಿನಾಚರಣೆ ನಿಮಿತ್ತ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಮಾ. 5 ಸಂಜೆ ನಡೆದ ಮಾತೃ ನಮನ ಕಾರ್ಯಕ್ರಮದಲ್ಲಿ ಶಾಸಕರ ನೇತೃತ್ವದಲ್ಲಿ
ನಡೆದ ಕುಕ್ಕರ ವಿತರಣೆ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ. ಈ ಕುರಿತು ಸುಮೋಟೋ ಪ್ರಕರಣ ದಾಖಲಾ ಗಿಲ್ಲ. ಶಾಸಕರ ವಿರುದ್ಧಸುಮೋಟೋ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಲಾ ಗುವುದು ಎಂದರು. ಈ ವೇಳೆ ಮುಖಂಡರಾದ ವಿಶ್ವನಾಥ ಪಾಟೀಲ್ ಮಾಡಗೂಳ್,ಪದ್ಮಾಕ ಪಾಟೀಲ್, ಪಸಾರ್ಗಿ,ಶ್ರೀನಾಥ ದೇವಣಿ,
ಸುನಿಲ್ ಡಿ.ಎನ್. ಪತ್ರಿ ಇದ್ದರು.