ಜನತೆಗೆ ಅತಿ ಅವಶ್ಯಕವಾಗಿರುವ ಆಕ್ಸಿಜನ್ ಘಟಕ ಸ್ಥಾಪನೆಯಿಂದ ಸೋಂಕಿತರಿಗೆ ವರದಾನ: ಜಿ.ಶರಣಪ್ಪ

ವಿಜಯಪುರ, ಜೂ.2-ನಗರದ ಇಂಡಿ ರಸ್ತೆಯ ಹೊರವಲಯದ ಕೆ.ಐ.ಡಿ.ಬಿ ಕಿರಾಣಾ ಬಝಾರ ಎಂ.ಆರ್ ಇಂಡಸ್ಟ್ರೀಜ್‍ನ ಮತ್ತೊಂದು ಆಕ್ಷಿಜನ್ ಯುನಿಟ್-2 ಘಟಕ ಉದ್ಘಾಟಿಸಿ ಚಾಲನೆ ನೀಡಲಾಯಿತು.
ಆಕ್ಸಿಜನ್ ಘಟಕ ಉದ್ಘಾಟಿಸಿದ ಹೆಸ್ಕಾಂ ಅಧೀಕ್ಷಕ ಅಭಿಯಂತರರಾದ ಜಿ.ಶರಣಪ್ಪ ಮಾತನಾಡಿ ನಗರದ ಜನತೆಗೆ ಅತಿ ಅವಶ್ಯಕವಾಗಿರುವ ಆಕ್ಸಿಜನ್ ಘಟಕ ಸ್ಥಾಪಿಸುವುದರಿಂದ ಸೋಂಕಿತರಿಗೆ ಒಂದು ವರದಾನವಾಗಿ ಪರಿಣಮಿಸಲಿದೆ ಎಂದು ಹೇಳಿದರು.
ಈಗಾಗಲೇ ಉದ್ಯಮಿ ರಫೀಕ ಖಾನೆ ಜಿಲ್ಲೆಯಾದ್ಯಂತ ಕರೋನ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ನೀಡುತ್ತಿದ್ದಾರೆ ಅಲ್ಲದೆ ಮುಂದಿನ ದಿನಗಳಲ್ಲಿ ಕರೋನ ಸೋಂಕಿತರಿಗೆ ಆಕ್ಸಿಜನ್ ಕೊರತೆಯಾಗಂತೆ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಕೋವಿಡ್-19ರ ಸರ್ಕಾರ ನಿಯಮದಂತೆ ಘಟಕವನ್ನು ಉದ್ಘಾಟಿಸಿಲಾಯಿತು ಎಂದರು.
ನಗರದ ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರೀಪ ಮಾತನಾಡಿ ಈ ಘಟಕ ಪ್ರಾರಂಬಿಸುವುದರಿಂದ ಸೋಂಕಿತರಿಗೆ ಹೆಚ್ಚು ಹೆಚ್ಚು ಅನುಕೂಲವಾಗಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಉದ್ಯಮಿ ರಫೀಕ ಖಾನೆ ಮಾತನಾಡಿ ಈಗಾಗಲೇ ಜಿಲ್ಲಾಡಳಿತ ಅನೇಕ ಸಹಾಯ ಸಹಕಾರ ನೀಡಿದೆ ನಗರದ ಜನತೆಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ನೂತನ ಆಕ್ಷಿಜನ್ ಯುನಿಟ್-2 ಘಟಕವನ್ನು ಆರಂಬಿಸಲಾಗಿದ್ದು ಈ ಘಟಕದಲ್ಲಿ ದಿನನಿತ್ಯ ಸುಮಾರು 2000 ಸಾವಿರ ಸಿಲೆಂಡಟರ್ ಭರಿಸಬಹುದಾಗಿದೆ ನಗರದ ಪತ್ರಕರ್ತರಿಗೆ ಹಾಗೂ ಪೋಲಿಸ ಇಲಾಖೆಯವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜು ಗುಡ್ಡೋಡಗಿ, ಬಾಬಾ ಜಹಗೀರದಾರ,ಇಕ್ಬಾಲ ದಫೇದಾರ, ಶಕೀಲ ಸುತಾರ, ವಿಶ್ವನಾಥ ಬಿರಾದಾರ,ಡಾ.ಮದರಿ,ಡಾ.ಚೌಧರಿ, ಡಾ.ಅಬಿಬುಲ್ಲಾ ಅತ್ತಾರ, ಡಾ.ನಸ್ರೀನ್ ಬಾನು ಆಲೂರ, ನಿವೃತ್ತ ಡಿ.ಎಸ್.ಪಿ ಚೌಕಿಮಠ, ಡಿ.ಎಸ್.ಪಿ, ಟಿ.ಎಸ್.ಸುಲ್ಪಿ, ಡಾ.ರಿಯಾನ್ ಬಾಂಗಿ ಹಾಗೂ ಇತರರು ಉಪಸ್ಥಿತರಿದ್ದರು.