ಜನತಾ ಲಾಕ್ ಡೌನ್ ಹಿನ್ನೆಲೆ-ಮುರೂರಿನಲ್ಲಿ ಚೆಕ್ ಪೋಸ್ಟ್ ನಿರ್ಮಾಣ

ಸುಳ್ಯ , ಮೇ.೧- ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಕಾರಣದಿಂದ ಕರ್ನಾಟಕ ರಾಜ್ಯಾದ್ಯಂತ ಹದಿನಾಲ್ಕು ದಿನಗಳ ಕಾಲ ಜನತಾ ಲಾಕ್ ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಸುಳ್ಯ ತಾಲೂಕಿನ ಗಡಿಪ್ರದೇಶವಾದ ಮುರೂರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಕಾಸರಗೋಡಿನಿಂದ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಪಂಜಿಕಲ್ ವರೆಗೆ ಬಂದು ಹಿಂತಿರುಗುತ್ತಿದೆ. ಇಲ್ಲಿ ಎರಡು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಅತೀ ಅಗತ್ಯ ಇರುವವರನ್ನು ಮಾತ್ರ ಐಡಿ ಕಾರ್ಡ್ ಆಧಾರದಲ್ಲಿ ಬಿಟ್ಟು ಕಳುಹಿಸುತ್ತಿದ್ದಾರೆ. ಕೇರಳ ರಾಜ್ಯದಲ್ಲೂ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಪ್ಯೂ ಇದ್ದ ಕಾರಣ ಗಡಿಪ್ರದೇಶದಲ್ಲಿ ಜನರ ಸಂಚಾರ ವಿರಳವಾಗಿದೆ.