ಜನತಾ ಮಿತ್ರ ವಾಹನಗಳಿಗೆ ಚಾಲನೆ

ಆನೇಕಲ್, ಜು.೧೭: ಹುಸ್ಕೂರು ಮದ್ದೂರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಜನತಾ ಮಿತ್ರ ವಾಹನಗಳಿಗೆಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಚಾಲನೆ ನೀಡಿದರು.
ನಂತರ ಮಾತನಾಡಿ ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನತೆ ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ನೀಡಬಹುದು. ಜನತಾ ಮಿತ್ರ ಕಾರ್ಯಕ್ರಮವನ್ನು ಆನೇಕಲ್ ಕ್ಷೇತ್ರದ ಪ್ರತಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದರು. ಈ ಜನತಾ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರ್ಕಾರ ಹೇಗೆ ಕೆಲಸ ಮಾಡಬೇಕು, ಜನರ ನಿರೀಕ್ಷೆಗಳೇನು, ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಹೇಳಿದರು.
ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿರವರು ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರ ಜನಪರ ಕಾರ್ಯಕ್ರಮಗಳು ಆನೇಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ ಎಂದರು. ಇನ್ನು ಆನೇಕಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಪಿ. ರಾಜು ರವರಿಗೆ ಕ್ಷೇತ್ರದ ಜನತೆ ಬೆಂಬಲ ಸೂಚಿಸಿದರೆ ಸುಮಾರು ೫೦ ಸಾವಿರ ಮನೆಗಳನ್ನು ಬಡವರಿಗೆ ಉಚಿತವಾಗಿ ನೀಡುತ್ತೇವೆ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುಧಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು.
ಆನೇಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ.ರಾಜು. ಮಾತನಾಡಿ ಅನ್ಯ ಪಕ್ಷಗಳ ಮುಖಂಡರು ಕೆ.ಪಿ.ರಾಜು ೨೦೨೩ ರಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ವರ್ಧೇ ಮಾಡುವುದಿಲ್ಲ ಎಂದು ಕ್ಷೇತ್ರದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ನಾನು ಸ್ವಲ್ಪ ಮಟ್ಟಿಗೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ, ಕ್ಷೇತ್ರದ ಜನರು ಯಾರು ಕೂಡ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಆನೇಕಲ್ ಕ್ಷೇತ್ರದಲ್ಲಿಈ ಬಾರಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಆನೇಕಲ್ ಕ್ಷೇತ್ರದಲ್ಲಿ ಹೈಟೆಕ್ ಸರ್ಕಾರಿ ಶಾಲೆಗಳು ನಿರ್ಮಾಣವಾಗಬೇಕು, ಪ್ರತಿಷ್ಠಿತ ಸರ್ಕಾರಿ ಆಸ್ಪತ್ತೆ ನಿರ್ಮಾಣ, ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಕೆರೆಗಳ ಅಭಿವೃದ್ದಿ, ನಿರುದ್ಯೋಗ ಸಮಸ್ಯೆಗೆ ತಿಲಾಂಜಲಿ. ರಸ್ತೆಗಳ ಅಭಿವೃದ್ದಿ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಆನೇಕಲ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ನಂ- ೦೧ ಕ್ಷೇತ್ರವನ್ನಾಗಿ ಮಾಡುವ ಹೆಬ್ಬಯಕೆ ನನ್ನದಾಗಿದ್ದು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹಾರೋಹಳ್ಳಿ ದೇವೇಗೌಡರು, ಜೆಡಿಎಸ್ ಮುಖಂರಾದ ರಾಜಣ್ಣ. ಪಾರ್ಥಸಾರಥಿ, ವಿನಯ್ ರೆಡ್ಡಿ, ಚಂದಾಪುರ ಆನಂದ್, ಯಲ್ಲಮ್ಮಪಾಳ್ಯ ರವಿ, ಮುಕುಂದ ಪಟೇಲ್, ಬಾಬು, ಮಾದೇಶ್, ರುದ್ರೇಶ್, ಸೊಪ್ಪಹಳ್ಳಿ ಸತೀಶ್, ಹೆಬ್ಬಗೋಡಿ ನಗರಸಭೆ ಸದಸ್ಯರು ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.