ಜನತಾ ಬಜಾರ್ ಮುಂದಿನ  ಮಳಿಗೆಗಳ  ಲೀಜ್ ರದ್ದು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21: ನಿಯಮದಂತೆ ಜಿಲ್ಲಾ ಸಹಕಾರ ಸಗಟು ಮಾರಾಟ ಸಂಘ  (ಜನತಾ ಬಜಾರ್) ನೊಂದಿಗೆ ಅಧಿಕೃತವಾಗಿ ಲೀಜ್ ಅಗ್ರಿಮೆಂಟ್ ಮಾಡಿಕೊಳ್ಳದ ಕಾರಣ ಜನತಾ ಬಜಾರ ಮುಂದಿರುವ ವಾಣಿಜ್ಯ ಮಳಿಗೆಗಳ ಲೀಜ್ ನ್ನು ಸಹಕಾರ ಸಂಘಗಳ ನಿಬಂದಕ ಕ್ಯಾಪ್ಟನ್ ಡಾ.ರಾಜೇಂದ್ರ ಅವರು ರದ್ದು ಮಾಡಿ.  ಆದೇಶಿಸಿದ್ದಾರೆಂದು ಸಂಘದ ಪ್ರಧಾನ ವ್ಯವಸ್ಥಾಪಕಿ ಶಾಕಿರಾಬಾನು,  ಅಧ್ಯಕ್ಷ ಜಿ.ನೀಲಕಂಠಪ್ಪ ತಿಳಿಸಿದ್ದಾರೆ.
ಅವರಿಂದು ನಿರ್ದೇಶಕರ ಜೊತೆಗೆ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ. ನಗರದ ಪೋಲಾ ವಿಕ್ರಂ ಅವರ ಲಕ್ಷ್ಮೀ ಅಸೋಸಿಯೇಟ್ಸ್  ಗೆ 30 ವರ್ಷಗಳ ಲೀಜ್ ಗೆ 2009 ರಲ್ಲಿ ನೀಡಿದೆ‌. ಆದರೆ ಈ ವರೆಗೆ ಅಗ್ರಮೆಂಟ್ ಮಾಡಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ನೀಡಿ ತಿಳಿಸಿದರು ಬರದ ಕಾರಣ ಲೀಜ್ ರದ್ದತಿಗೆ ಕ್ರಮ ಜರುಗಿದೆ. ಹೀಗಾಗಿ ವಾಣಿಜ್ಯ ಮಳಿಗೆಗಳಲ್ಲಿ ಹೀಗಿರುವವರು ಬಾಡಿಗೆಯನ್ನು ಸಂಘಕ್ಕೆ ತುಂಬಲು ತಿಳಿಸಿದೆ. ಅವರು ನೀಡದಿದ್ದಾರೆ. ಖಾಲಿ ಮಾಡಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಲಿದೆಂದು ತಿಳಿಸಿದರು.
ಆದಾಯದಲ್ಲಿ:
ಜನತಾ ಬಜಾರ್ 2.5 ಎಕರೆ ವಿಸ್ತಾರದ ಪ್ರದೇಶ ಹೊಂದಿದೆ. ಇಲ್ಲಿರುವ ಎಲ್ಲಾ ಕಟ್ಟಗಳನ್ನು ಬಾಡಿಗೆ ಇಲ್ಲ ಲೀಜ್ ನೀಡಿದೆ. ಇದರಿಂದ ವಾರ್ಷಿಕ 36 ಲಕ್ಷ ಆದಾಯ ಬರುತ್ತಿದೆ. ಅಂದಾಜು 12 ಲಕ್ಷ ರೂ ವೇತನಕ್ಕೆ ಹೋಗುತ್ತಿದೆ ಎಂದು ತಿಳಿಸಿದರು.
ಈ ತಿಂಗಳ 23 ರಂದು ಸಾಮಾನ್ಯ ಸಭೆ ಕರೆದಿದೆ. ಇದರಲ್ಲಿ ಇನ್ನಿತರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿದೆಂದರು.
ಸುದ್ದಿಗೋಷ್ಟಿ ಯಲ್ಲಿ ಸಂಘದ ನಿರ್ದೇಶಕರುಗಳಾದ ವೆಂಕಟೇಶ್ ಹೆಗಡೆ, ಅಲ್ಲಿಪುರ ವೆಂಕಟಸ್ವಾಮಿ, ಕಾತ್ಯಾನಿ ಮರಿದೇವಯ್ಯ, ಪಲ್ಲೇದ ಮೈತ್ರಿ, ವಿಜಯಕುಮಾರ್ ಗೌಡ, ನರೇಶ್ ಕುಮಾರ್ ಮೊದಲಾದವರು ಇದ್ದರು.