ಜನತಾ ನ್ಯಾಯಾಲಯದ ಸದುಪಯೋಗಕ್ಕೆ ನ್ಯಾಯಾಧೀಶ ನಾಲವಡೆ ಕರೆ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ19: ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ. ಹಾಗಾಗಿ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ಕರೆ ನೀಡಿದರು.
ಮಾ.16ರಂದು ನಡೆದ ರಾಷ್ಟೀಯ ಲೋಕ ಅದಾಲತನ್ನು ನಡೆಸಿ ಅವರು ಮಾತನಾಡಿ, ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಹಲವಾರು ಪ್ರಕರಣಗಳ ಪೈಕಿ ಒಟ್ಟು 11,557 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಅವುಗಳಲ್ಲಿ ಆಸ್ತಿ ವಿಭಾಗ ಕೋರಿದ 169 ದಾವೆಗಳು, 227 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 125 ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ 63 ಪ್ರಕರಣಗಳು, ರಾಜಿಯಾಗಬಹುದಾದ 78 ಕ್ರಿಮಿನಲ್ ಪ್ರಕರಣಗಳು ಹಾಗೂ 518 ಅಮಲ್ಜಾರಿ ಪ್ರಕರಣಗಳು ಸೇರಿವೆ ಎಂದು ಮಾಹಿತಿ ನಿಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಸ್. ಕುಂದರ್ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಂಡು ಪರಸ್ಪರ ಸೌರ್ಹಾದತೆಯಿಂದ ಸಮಾಜದಲ್ಲಿ ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ನ್ಯಾಯಾಧೀಶರಾದ ರಾಮಾ ನಾಯಕ್, ಸುಭಾಷ್ ಸಂಕದ, ಸತೀಶ್ ಎಲ್.ಪಿ, ಮಂಜುನಾಥ ಸಂಗ್ರೇಶಿ, ಮದ್ವೇಶ ದಬೇರ್, ಸುಭಾಷ ಬಂದು ಹೊಸಕಲ್ಲೆ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಎಮ್. ಜಿಪರೆ, ಪದ್ಮಶ್ರೀ ಎ. ಮುನ್ನೋಳಿ, ಮಲ್ಲಿಕಾರ್ಜುನ ಎ. ಅಂಬಲಿ, ಕೆ. ಉಮಾ, ಲೋಕೇಶ ಹವಳೆ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಯಮಕನಮರಡಿ, ಸ್ಮಿತಾ ಎಮ್. ಮಾಲಗಾಂವೆ, ಚಂದ್ರಕಾಂತ, ಮಾದೇಶ ಎಮ್.ವಿ, ಚಾಂದನಿ ಜಿ.ಯು ಹಾಗೂ ಸಂಧಾನಕಾರ ವಕೀಲರುಗಳಾದ ಮಲ್ಲಿಕಾರ್ಜುನ ಜಿ. ಭೃಂಗಿಮಠ, ಡಿ.ಬಿ.ಮಠದ, ಆರ್.ಎಸ್.ಯಳಸಂಗಿಮಠ, ವಿ.ಜಿ.ಕುಲಕರ್ಣಿ, ಜೆ.ವಿ.ಖುದಾನಪುರ, ಜಾವೀದ ಗುಡಗುಂಟಿ, ದೀಪಾ ಬಿರಾದಾರ, ಅಶೋಕ.ಹೆಚ್.ಜೈನಾಪೂರ, ಜಯಶ್ರೀ ಮಠಪತಿ, ಬಿ.ಎಮ್.ಅವತಾಡೆ, ಆರ್.ಕೆ ಪಾಟೀಲ್, ಜೆ.ಎಮ್.ಭೂಸಗೊಂಡ, ರಾಹುಲ್ ನಾಯಕ್, ಎಸ್.ಎಸ್.ಇನಾಮದಾರ, ಬಸವರಾಜ ಎಮ್.ಎಮ್, ಬಿ.ಕೆ.ಮಠ, ಯಲ್ಲಪ್ಪ ಬಡಿಗೇರ, ಎಮ್.ಸಿ.ಲೋಗಾವಿ ಅವರುಗಳು ಸಂಧಾನಕಾರ ವಕೀಲರಾಗಿ ಪ್ರಕರಣದ ರಾಜಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು.