ಜನತಾ ಕಫ್ರ್ಯೂ 5ನೇ ದಿನ ಮನೆಯಿಂದ ಹೊರಬರದ ಜನ: ರಸ್ತೆ ಭಣಭಣ

ಕಲಬುರಗಿ ಏ 2: ಜನತಾ ಕಫ್ರ್ಯೂ ಜಾರಿಗೆ ಬಂದ 5ನೇ ದಿನವಾದ ಇಂದು ಭಾನುವಾರವೂ ಸಹ ಆಗಿದ್ದರಿಂದ ನಗರದ ರಸ್ತೆಗಳು ಹೆಚ್ಚು ಕಡಿಮೆ ನಿರ್ಜನವಾಗಿದ್ದವು.ಅಲ್ಲೊಂದು ವಾಹನ ಸಂಚಾರ ಬಿಟ್ಟರೆ ಬಹುತೇಕ ಕಡೆ ರಸ್ತೆಯಲ್ಲಿ ಜನ ಸಂಚಾರ ಕಂಡು ಬರಲಿಲ್ಲ.
ಇಂದಿನಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಪರಿಷ್ಕøತ ಆದೇಶ ಜಾರಿ ಮಾಡಿದ್ದು, ಕಿರಾಣಿ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತಳ್ಳುಗಾಡಿಯಲ್ಲಿ ಹಣ್ಣು ತರಕಾರಿಗಳನ್ನು ಮಾರಲು,ಹಾಲಿನ ಬೂತ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.ನಿಗದಿರ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.ಸರಕಾರದ ಈ ಕ್ರಮವು ಮಾರುಕಟ್ಟೆಗಳಲ್ಲಿ ಜನಸಂದಣಿ ತಪ್ಪಿಸಬಹುದು ಎಂದು ಆಶಿಸಲಾಗಿದೆ.
ನಗರದ ಕೆಲವು ಹೊಟೇಲ್ಲುಗಳು ತೆರೆದಿದ್ದು ಕೇವಲ ಪಾರ್ಸಲ್ ಮತ್ತು ಹೋಂ ಡೆಲಿವರಿ ನೀಡಲಾಗುತ್ತಿದೆ.ಔಷಧಿ ಅಂಗಡಿ,ಹಾಲಿನ ಅಂಗಡಿ,ಹಣ್ಣಿನಂಗಡಿ ಎಂದಿನಂತೆ ತೆರೆದಿವೆ.