ಜನತಾ ಕಫ್ರ್ಯೂ 4 ನೇ ದಿನ ಪೊಲೀಸ್ ಅಧಿಕಾರಿಗಳ ನಗರ ಪರ್ಯಟನೆ

ಕಲಬುರಗಿ ಮೇ 1: ಜನತಾ ಕಫ್ರ್ಯೂ ಆರಂಭಗೊಂಡ 4 ನೇ ದಿನವಾದ ಇಂದು ಪೊಲೀಸ್ ಅದಿಕಾರಿಗಳು ನಗರದ ವಿವಿಧ ಕಡೆ ಸಂಚರಿಸಿ ಪರಿಸ್ಥಿತಿಯ ಅವಲೋಕನ ಮಾಡಿದರು.
ಡಿಸಿಪಿ ಡಿ. ಕಿಶೋರ್ ಬಾಬು,ಎ ವಿಭಾಗದ ಎಸಿಪಿ ಅಂಶುಕುಮಾರ್, ಬಿ ವಿಭಾಗದ ಎಸಿಪಿ ಕಟ್ಟಿಮನಿ, ಅಧಿಕಾರಿಗಳಾದ ಎಸ್.ಆರ್ ನಾಯಕ್, ಬಸವರಾಜ ತೇಲಿ ಮತ್ತು ಸಿಬ್ಬಂದಿ ವರ್ಗದವರು ನಗರ ಪರ್ಯಟನೆ ಕೈಗೊಂಡರು.
ಸೂಪರ್ ಮಾರುಕಟ್ಟೆ ,ನೆಹರು ಗಂಜ್, ಬಂಬೂ ಬಜಾರ್,ಕಿರಾಣಾ ಬಜಾರ್, ಸರದಾರ ವಲ್ಲಭಭಾಯಿ ಪಟೇಲ್ ವೃತ್ತ , ರೈಲ್ವೆ ಸ್ಟೇಷನ್ ಮೊದಲಾದ ಪ್ರದೇಶದಲ್ಲಿ ಅವರು ಸಂಚರಿಸಿದರು