ಜನತಾ ಕಫ್ರ್ಯೂ ನಿಯಮ ಪರಿಷ್ಕೃತ ಸರ್ಕಾರದ ಆದೇಶ

ಗದಗ ಮೇ.3 : ರಾಜ್ಯ ಸರ್ಕಾರ ಜನತಾ ಕಪ್ರ್ಯೂ ನಿಯಮಗಳನ್ನು ಪರಿಷ್ಕೃರಿಸಿ ಆದೇಶ ಹೊರಡಿಸಿದೆ. ಸಂತೆ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಜನದಟ್ಟಣೆ ಆಗುತ್ತಿರುವುದರಿಂದ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಪರಿಷ್ಕೃತ ಆದೇಶವನ್ನು ಮೇ 2 ರಿಂದ ರಾಜ್ಯದಲ್ಲಿ ಜಾರಿಗೊಳಿಸಿದೆ.
ನೂತನ ಆದೇಶದಂತೆ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಿದೆ. ಇವುಗಳಿಗೆ ಪರ್ಯಾಯವಾಗಿ ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಹಾಪ್ ಕಾಮ್ಸ್ ಗಳು, ಎಲ್ಲ ರೀತಿಯ ಹಾಲಿನ ಬೂತಗಳು, ತಳ್ಳುವ ಗಾಡಿಗಳಲ್ಲಿ ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಎ. ಪಿ. ಎಂ. ಸಿ ಮತ್ತು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವಗೆರೆ ವ್ಯವಹರಿಸಲು ಕಾಲಾವಧಿಯನ್ನು ವಿಸ್ತರಿಸಲಾಗಿದೆ.
ಸರ್ಕಾರದ ಈ ಆದೇಶವನ್ನು ಯಥವತ್ತಾಗಿ ಗದಗ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಕೊರೊನ ಸೊಂಕು ನಿಯಂತ್ರಣಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೆÇಲೀಸ್ ಇಲಾಖೆಯವರು ಸರ್ಕಾರದ ಪರಿಷ್ಕೃತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.