ಜನತಾದರ್ಶನ ಕಾರ್ಯಕ್ರಮ: ವಿವಿಧ ಭೇಡಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ ಯಾಕಾಪೂರ

ಚಿಂಚೋಳಿ,ಸೆ26- ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ನಡೆಸಿದÀ ಜನತಾ ದರ್ಶನ ಕಾರ್ಯಕ್ರಮದಲಿ. ರೈತರ ಸಾಲ ಮನ್ನ ಸೇರಿದಂತೆ ವಿವಿಧ ಬೇಡಿಕೆಯ ಮನವಿ ಪತ್ರವನ್ನು ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ಅವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ ಅವಿನಾಶ ಜಾಧವ ಇತರರು ಇದ್ದರು.
ತಾಲ್ಲೂಕಿನಲ್ಲಿ ಸರಕಾರದ ಪೆÇೀಲಿಟೇಕನಿಕ್, ಬಿ.ಇಡಿ ಮತ್ತು ಸ್ನಾತಕೋತರ ಕೇಂದ್ರ ಪ್ರಾರಂಭಿಸಬೇಕು. ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಟ್ಯಾಂಕ್ ಹತ್ತಿರ ಇರುವ ರೈತರ ತರಬೇತಿ ಕಟ್ಟಡ ಖಾಲಿ ಉಳಿದಿದ್ದು, ಅದರಲ್ಲಿ ರೈತ ತರಬೇತಿ ಕೇಂದ್ರವನ್ನು ಸರಕಾರ
ಪ್ರಾರಂಭಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಎತ್ತಿಪೆÇೀತ, ಮಾಣಿಕಪೂರ ಮತ್ತು ಚಂದ್ರಂಪಳ್ಳಿ ನಾಗರಾಳ ನೀರಾವರಿ ಯೋಜನೆಗಳು, ಕುಂಚಾವರಾಂ ವನ್ಯಧಾಮಗಳನ್ನು ಪ್ರವಾಸಿ ತಾಣ ಕೇಂದ್ರಗಳನ್ನಾಗಿ ಸರಕಾರ ಘೋಷಿಸಬೇಕು.
ಚಿಂಚೋಳಿ ತಾಲ್ಲೂಕವನ್ನು ಸರಕಾರ ಈಗಾಗಲೇ ಬರಗಾಲವೆಂದು ಘೋಷಣೆ ಮಾಡಿದೆ. ರೈತರ ಮುಂಗಾರು ಬೆಳೆಗಳಿಗೆ ಹಾನಿ ಉಂಟಾಗಿರುವುದ್ದರಿಂದ ರೈತರು ಪಡೆದ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ಚಿಂಚೋಳಿ ಪಟ್ಟಣಕ್ಕೆ ಹೊಂದಿಕೊಂಡು ಹರಿಯುವ ಮುಲ್ಲಾಮಾರಿ ನದಿ ದಂಡೆಗೆ ಹೊಂದಿಕೊಂಡಿರುವ ಮನೆಗಳಿಗೆ ನೀರು ನುಗ್ಗುವುದ್ದರಿಂದ ಪ್ರವಾಹ ತಡೆಯಲು ನದಿ ದಡೆಯಲ್ಲಿರುವ ಬುಗ್ಗಿಯಿಂದ ಹರಿಜನವಾಡದವರೆಗೆ ತಡೆ ಗೋಡೆ ನಿರ್ಮಿಸಬೇಕು.
ಚಿಂಚೋಳಿ ಚಂದಾಪೂರ ಅವಳಿ ನಗರದ ಒಟ್ಟು 23 ವಾರ್ಡಗಳಲ್ಲಿ ಸಿ.ಸಿ.ರಸ್ತೆ ಒಳ ಚರಂಡಿ ನಿರ್ಮಿಸಲು ಸರಕಾರದಿಂದ 20 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವುದು. ತಾಲ್ಲೂಕಿನ ಸರಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ರೈತರ ಜಮೀನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು ಮತ್ತು ಸರಕಾರಿ ಜಮೀನುಗಳಲ್ಲಿ ಸುಮಾರು 10 ವರ್ಷಗಳಿಗಿಂತ ಮೇಲ್ಪಟ್ಟ ಅವಧಿಯಿಂದ ವಾಸದ ಮನೆ ನಿರ್ಮಿಸಿಕೊಂಡ ನಿವಾಸಿಗಳಿಗೆ ಸರಕಾರ ಆಕ್ರಮ, ಸಕ್ರಮ ಯೋಜನೆ ಅಡಿ ಹಕ್ಕು ಪತ್ರ ನೀಡಬೇಕು ಎಂದು
ರಮೇಶ ಯಾಕಾಪೂರ ಅವರು ತಾವು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.