ಜನತಾಕಫ್ರ್ಯೂ 6ನೇ ದಿನ ಕಿರಾಣಿ ಬಜಾರ್‍ನಲ್ಲಿ ಕಿಕ್ಕಿರಿದ ಜನ

ಕಲಬುರಗಿ ಮೇ 3: ಕಫ್ರ್ಯೂ ಪರಿಷ್ಕøತ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಿರಾಣಿ ಅಂಗಡಿಗಳನ್ನು ಚಾಲು ಇಡಬಹುದು ಎಂಬ ಆದೇಶ ಬಂದ ಹಿನ್ನೆಲೆಯಲ್ಲಿ ಇಂದು ನಗರದ ಕಿರಾಣಿ ಬಜಾರ್‍ನಲ್ಲಿ ಕಿರಾಣಿ ಸಾಮಗ್ರಿ ಕೊಳ್ಳುವವರ ನೂಕುನುಗ್ಗಲು ಉಂಟಾಯಿತು.
ಎಲ್ಲಿ ನೋಡಿದರಲ್ಲಿ ಗೂಡ್ಸ್ ಗಾಡಿಗಳು,ಆಟೋಗಳು, ವಿಪರೀತ ಜನ ಸಂದಣಿ, ಮಾಸ್ಕ್ ಧಾರಣೆ ಸಾಮಾಜಿಕ ಅಂತರಕ್ಕಂತೂ ಎಳ್ಳು ನೀರು ಬಿಟ್ಟಾಗಿತ್ತು. ನಗರದ ಹಾಗೂ ಸಮೀಪದ ಊರುಗಳ ಕಿರಾಣಿ ವರ್ತಕರು ಕಿರಾಣಿ ಬಜಾರದಲ್ಲಿ ಸಗಟು ಖರೀದಿಗೆ ಬರುತ್ತಾರೆ.ಖರೀದಿಯ ಆತುರದಲ್ಲಿ ಕೋವಿಡ್ ನಿಯಮಾವಳಿಗಳಿಗೆ ತಿಲಾಂಜಲಿ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೊರೋನಾ ತನ್ನ ಉಪಟಳ ತೀವ್ರಗೊಳಿಸಿದೆ.ಎಲ್ಲ ನಾಗರಿಕರು ಕೈ ಜೋಡಿಸಿ , ನಿಯಮ ಪಾಲಿಸಿ ಕೊರೋನಾ ಹಾವಳಿಗೆ ತಡೆ ಹಾಕಲು ಮುಂದಾಗಬೇಕು.ದಿನಸಿ ವಸ್ತುಗಳು ಎಂದಿನ ಧಾರಣಿಯಲ್ಲಿ ಜನಸಾಮಾನ್ಯರ ಕೈಗೆಟುಕುವಂತೆ ನೋಡಿಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿದೆ.